ನಾಯಿಗಾಗಿ ಹೆತ್ತು, ಹೊತ್ತ ತಾಯಿಯನ್ನೇ ಹತ್ಯೆ ಮಾಡಿದ ಕ್ರೂರಿ ಮಗ

Sampriya

ಶುಕ್ರವಾರ, 18 ಏಪ್ರಿಲ್ 2025 (16:12 IST)
ನವದೆಹಲಿ: ನಾಯಿ ಖರೀದಿಸಲು ₹200 ನೀಡಿಲ್ಲವೆಂದು ಕೋಪಗೊಂಡ ಮಗ, ತಾಯಿಯನ್ನೇ ಹೊಡೆದು ಸಾಯಿಸಿರುವ ಘಟನೆ ಶುಕ್ರವಾರ ಛತ್ತೀಸ್‌ಗಢದ ರಾಯ್‌ಪುರದಲ್ಲಿ  ನಡೆದಿದೆ.

45 ವರ್ಷದ ಇ-ರಿಕ್ಷಾ ಚಾಲಕ ಪ್ರದೀಪ್ ದೇವಾಂಗನ್ ತನ್ನ ತಾಯಿಯನ್ನು ಕೊಂದ ಆರೋಪಿ.

₹800ಗೆ ನಾಯಿಮರಿ ಖರೀದಿಸಲು ಪ್ರದೀಪ್ ಮುಂದಾಗಿದ್ದ, ಇದಕ್ಕೆ ಸರಿದೂಗಿಸಲು ಇನ್ನೂ ₹200 ಬೇಕಾಗಿತ್ತು.  ಈ ವೇಳೆ ತಮ್ಮ ಮಕ್ಕಳು ಹಣ ನೀಡಲು ನಿರಾಕರಿಸಿದಾಗ, ತಾಯಿ ಬಳಿ ಹಣ ಕೇಳಿದ್ದಾರೆ. ನೀಡಲು ಒಪ್ಪಂದಕ್ಕೆ  ದೇವಾಂಗನ್ ತನ್ನ ತಾಯಿಯ ಮೇಲೆ ಸುತ್ತಿಗೆಯಿಂದ ದಾಳಿ ಮಾಡಿ ಮಾರಣಾಂತಿಕ ಗಾಯಗಳನ್ನು ಉಂಟುಮಾಡಿದ್ದಾರೆ. ಅದಲ್ಲದೆ ಅವನ ಹೆಂಡತಿ
ರಾಮೇಶ್ವರಿಯ ಮೇಲೂ ಹಲ್ಲೆ ಮಾಡಿದ್ದಾನೆ.

ಅವರ 15 ವರ್ಷದ ಮಗ ಮಧ್ಯಪ್ರವೇಶಿಸಿ ನೆರೆಹೊರೆಯವರ ಸಹಾಯಕ್ಕಾಗಿ ಕೂಗಿದ್ದಾನೆ.

ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರೂ ಮಹಿಳೆಯರನ್ನು ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ವೇಳೆ ತಾಯಿ ಮೃತಪಟ್ಟಿದ್ದಾರೆ.
ಅಧಿಕಾರಿಗಳು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ದೇವಾಂಗನ್‌ಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ