ಪ್ರಿಯತಮ ಜತೆ ಸೇರಿ ಪತಿಯನ್ನೇ ಮುಗಿಸಿದ ಪತ್ನಿ, ಎಸ್ಕೇಪ್ ಆಗಲು ಮಾಡಿದ ನಾಟಕ ಕೇಳಿದ್ರೆ ಶಾಕ್ ಆಗ್ತೀರಾ

Sampriya

ಶುಕ್ರವಾರ, 18 ಏಪ್ರಿಲ್ 2025 (16:00 IST)
Photo Credit X
ಮೀರತ್‌: ದೇಶವನ್ನೇ ಬೆಚ್ಚಿಬೀಳಿಸಿದ ನೇವಿ ಅಧಿಕಾರಿ ಸೌರಭ್ ರಜಪೂತ್ ಹತ್ಯೆ ಪ್ರಕರಣದ ಬೆನ್ನಲ್ಲೇ ಇದೀಗ  ಮತ್ತೊಂದು ಅಂತಹದ್ದೇ ಪ್ರಕರಣವೊಂದು ದೇಶವನ್ನೇ ಬೆಚ್ಚಿಬೀಳಿಸಿದೆ.

ಹಾವು ಕಡಿತದಿಂದ 25 ವರ್ಷದ ಅಮಿತ್ ಕಶ್ಯಪ್ ವ್ಯಕ್ತಿಯೊಬ್ಬ ಈಚೆಗೆ ಸಾವನ್ನಪ್ಪಿದ್ದ ಎಂದು ಸುದ್ದಿಯಾಗಿತ್ತು. ಆದರೆ ಇದೀಗ ತನಿಖೆಯಲ್ಲಿ ಇದೊಂದೆ ಕೊಲೆ ಎಂದು ತಿಳಿದುಬಂದಿದೆ.

ಮಿಕ್ಕಿ ಎಂದು ಕರೆಯಲ್ಪಡುವ ಅಮಿತ್ ಕಶ್ಯಪ್ (25) ಅವರು ವೈಪರ್ ಹಾವಿನ ಕಡಿತದಿಂದ ಸಾವನ್ನಪ್ಪಿದರು ಎನ್ನಲಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಅಸಲಿಯತ್ತು ಹೊರಬಿದ್ದಿದ್ದು,  ಕತ್ತು ಹಿಸುಕಿ ಕೊಲೆ ಮಾಡಿರುವುದು ವರದಿಯಲ್ಲಿ ತಿಳಿದುಬಂದಿದೆ. ಇದೀಗ ಕೊಲೆಯನ್ನು ಅಮಿತ್ ಪತ್ನಿ ಹಾಗೂ ಪ್ರಿಯಕರ ಸೇರಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಅಮಿತ್ ಪತ್ನಿ ರವಿತಾ ತನ್ನ ಪತಿಯ ಸ್ನೇಹಿತನಾಗಿದ್ದ ಅಮರ್‌ದೀಪ್ ಜೊತೆ ಅಕ್ರಮ ಸಂಬಂಧವನ್ನು ಹೊಂದಿದ್ದಳು ಎಂದು ಎಸ್ಪಿ ದೇಹತ್ ರಾಕೇಶ್ ಕುಮಾರ್ ಮಿಶ್ರಾ ಹೇಳಿಕೆ ನೀಡಿದ್ದಾರೆ.

ಪತ್ನಿಯ ಅಕ್ರಮ ಸಂಬಂಧ ತಿಳಿದ ಬಳಿಕ ಗಂಡ ಹೆಂಡತಿ ಮಧ್ಯೆ ಜಗಳ ಶುರುವಾಗಿದೆ. ತಮ್ಮ ಪ್ರೀತಿಗೆ ಅಡ್ಡವಿರುವ ಪತಿಯನ್ನು ಮುಗಿಸಲು ಪ್ರಿಯಕರ ಜತೆ ಸೇರಿ ಸಂಚು ರೂಪಿಸಿದ್ದಾಳೆ. ₹1000 ರೂಪಾಯಿಗೆ ಹಾವನ್ನು ಖರೀದಿ ಮಾಡಿ, ಅಮಿತ್ ಕತ್ತು ಹಿಸುಕಿ ಕೊಲೆ ಮಾಡಿ ನಂತರ  ಹಾವನ್ನು ಮೃತದೇಹದ ಪಕ್ಕಾ ಇಟ್ಟಿದ್ದಾಳೆ. ದೇಹದ ಕೆಳಗೆ ಸಿಕ್ಕಿಬಿದ್ದಿದ್ದ ಹಾವು ಅಮಿತ್‌ಗೆ ಹತ್ತು ಬಾರೀ  ನಂತರ ಹಲವು ಬಾರಿ ಕಚ್ಚಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ