West Bengal: ಪಶ್ಚಿಮ ಬಂಗಾಲ ಹಿಂಸಾಚಾರದಲ್ಲಿ ಮೂಗುತೂರಿಸಿದ ಬಾಂಗ್ಲಾದೇಶ: ನಿಮ್ದು ನೀವು ನೋಡ್ಕೊಳ್ಳಿ ಎಂದ ಭಾರತ

Krishnaveni K

ಶುಕ್ರವಾರ, 18 ಏಪ್ರಿಲ್ 2025 (12:01 IST)
Photo Credit: X
ನವದೆಹಲಿ: ಪಶ್ಚಿಮ ಬಂಗಾಲದಲ್ಲಿ ಇತ್ತೀಚೆಗೆ ವಕ್ಫ್ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದ ಬಗ್ಗೆ ಕಾಮೆಂಟ್ ಮಾಡಿರುವ ಬಾಂಗ್ಲಾದೇಶಕ್ಕೆ ಭಾರತ ಸರಿಯಾಗಿಯೇ ತಿರುಗೇಟು ನೀಡಿದ್ದು ಮೊದಲು ನಿಮ್ದು ನೀವು ನೋಡಿಕೊಳ್ಳಿ ಎಂದಿದೆ.

ಪಶ್ಚಿಮ ಬಂಗಾಲದ ಮುರ್ಷಿದಾಬಾದ್ ನಲ್ಲಿ ಇತ್ತೀಚೆಗೆ ಮುಸ್ಲಿಮರ ಉದ್ರಕ್ತ ಗುಂಪು  ವಕ್ಫ್ ಪ್ರತಿಭಟನೆ ನಡೆಸಿದ್ದು ಹಿಂಸಾರೂಪ ತಾಳಿತ್ತು. ಘಟನೆಯಲ್ಲಿ ನೂರಾರು ಹಿಂದೂಗಳು ಮನೆ ಬಿಟ್ಟು ಪಲಾಯನ ಮಾಡಿದ್ದಾರೆ ಎಂದು ಸುದ್ದಿಯಾಗಿತ್ತು.

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬಾಂಗ್ಲಾದೇಶದ ಮಾಧ್ಯಮ ವಕ್ತಾರ ಶಫೀಕುಲ್ ಅಲಾಮ್ ‘ಅಲ್ಪ ಸಂಖ್ಯಾತರಾಗಿರುವ ಮುಸ್ಲಿಮರ ರಕ್ಷಣೆಗೆ ಭಾರತ ಮತ್ತು ಪಶ್ಚಿಮ ಬಂಗಾಲ ಸರ್ಕಾರ ಎಲ್ಲಾ ಕ್ರಮ ಕೈಗೊಳ್ಳಲಿ ಎಂದು ನಾವು ಆಗ್ರಹಿಸುತ್ತೇವೆ’ ಎಂದಿದ್ದರು.

ಇದಕ್ಕೆ ತಕ್ಕ ತಿರುಗೇಟು ನೀಡಿರುವ ಭಾರತದ ವಿದೇಶಾಂಗ ಇಲಾಖೆ ‘ಮೊದಲು ನಿಮ್ಮ ದೇಶದಲ್ಲಿ ನಡೆಯುತ್ತಿರುವ ಹಿಂದೂ ಅಲ್ಪ ಸಂಖ್ಯಾತರ ಮೇಲಿನ ದಾಳಿಗಳನ್ನು ತಡೆಯಿರಿ. ನಿಮ್ಮ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು ಕ್ರಿಮಿನಲ್ ಗಳು ಭಯವಿಲ್ಲದೇ ಓಡಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಉತ್ತರಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ