ಶೀಘ್ರದದಲ್ಲೇ ನೀರೋಳಗೆ ಸಾಗಬಲ್ಲ ಡ್ರೋನ್

ಭಾನುವಾರ, 12 ಜೂನ್ 2022 (13:59 IST)
ನವದೆಹಲಿ : ನೀರೋಗಿನಿಂದ ಸಾಗಬಲ್ಲ ಅತ್ಯಾಧುನಿಕ ಆಟೋನೋಮಸ್ ಡ್ರೋನ್ ಪ್ರಯೋಗ ಯಶಸ್ವಿಯಾಗಿದೆ.

ಕ್ಯಾಂಟ್ಬರಿ ವಿಶ್ವಿವಿದ್ಯಾಲಯದ ಸಂಶೋಧಕರು ಸಂಶೋಧಕರು ಈ ಡ್ರೋನ್ ಪ್ರಯೋಗ ಯಶಸ್ವಿಯಾಗಿಸಿದ್ದಾರೆ. ಇದರಿಂದ ಸಮುದ್ರ ಮಾರ್ಗದಲ್ಲಿನ ಭದ್ರತೆ ಸವಾಲು ಸುಲಭವಾಗಿ ನಿವಾರಿಸಲು ಸಾಧ್ಯವಾಗಲಿದೆ.

ಈ ತಂತ್ರಜ್ಞಾನ ಭಾರತದ ಹಿಂದೂ ಮಹಾಸಾಗರ, ದಕ್ಷಿಣ ಚೀನಾ ಹಾಗೂ ಇಂಡೋ-ಪೆಸಿಫಿಕ್ ಸಮುದ್ರದಲ್ಲಿ ನೆರವಾಗಲಿದೆ.

ಹಿಂದೂಮಹಾಸಾಗರ, ದಕ್ಷಿಣ ಚೀನಾ, ಇಂಡೋ ಪೆಸಿಫಿಕ್ ಸಮುದ್ರದಲ್ಲಿ ಭಾರತೀಯ ನೌಕಾಪಡೆಯನ್ನು ಬಲಪಡಿಸಲು  ಅತ್ಯಾಧುನಿಕ ಡ್ರೋನ್ ಸೂಕ್ತ. ಆಟೋನೋಮಸ್ ಡ್ರೋನ್ ಇದಾಗಿದ್ದು, ಇದರಿಂದ ಸಮುದ್ರದಲ್ಲಿ ಕಣ್ಗಾವಲು ಹಾಗೂ ಭದ್ರತೆ ಮತ್ತಷ್ಟು ಹೆಚ್ಚಲಿದೆ.

ಭಾರತ ರಕ್ಷಣಾ ಇಲಾಖೆ ಭಾರತ ನಿರ್ಮಿತ ಡ್ರೋನ್ ಅಭಿವೃದ್ಧಿಪಡಿಸಲು ತಯಾರಿ ನಡೆಸಿದೆ. ನೂತನ ಹಾಗೂ ಅತ್ಯಾಧುನಿಕ ಡ್ರೋನ್ನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ  ಅಭಿವೃದ್ಧಿಪಡಿಸಲಿದೆ. ಈಗಾಗಲೇ ವಿಶ್ವದಲ್ಲಿ ಈ ಪ್ರಯೋಗ ಯಶಸ್ವಿಯಾಗಿ ನಡೆದಿದೆ. ಈ ಮೂಲಕ ಭಾರತ ನಿರ್ಮಿತ ಡ್ರೋನ್  ಭಾರತದ ಸಮುದ್ರದ ಗಡಿಯಲ್ಲಿ ಪಹರ ಕಾಯುವ ಕೆಲಸ ಮಾಡಲಿದೆ.

ಡಿಆರ್ಡಿಒ ಅಭಿವೃದ್ಧಿ ಪಡಿಸುತ್ತಿರುವ ಈ ಡ್ರೋನ್ ಮಿಲಿಟರಿ ಉದ್ದೇಶಕ್ಕೆ ಬಳಕೆ ಮಾಡಲು ಕೆಲ ಸಮಯ ಹಿಡಿಯಲಿದೆ. ಆದರೆ ನೌಕಾಪಡೆಯ ಬಲ ಹೆಚ್ಚಿಸಲು ಆಟೋನೋಮಸ್ ಅಂಡರ್ ವಾಟರ್ ಡ್ರೋನ್ ಖರೀದಿಸಲು, ಆಮದು ಮಾಡಿಕೊಳ್ಳಲು ಮುಕ್ತವಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ