ಸೂಸೈಡ್ ಡ್ರೋನ್ ಅಮೆರಿಕಾದ ಗಿಫ್ಟ್ ಉಕ್ರೇನ್

ಗುರುವಾರ, 17 ಮಾರ್ಚ್ 2022 (16:21 IST)
ಅಮೆರಿಕವೇ ನಿರ್ಮಿಸಿರುವ ಡ್ರೋನ್‌. ಉಕ್ರೇನ್‌ಗೆ ರಕ್ಷಣ ನೆರವು ನೀಡುವ ಉದ್ದೇಶದಿಂದ ಈ ಡ್ರೋನ್‌ ನೀಡಲು ಅಮೆರಿಕ ಮುಂದಾಗಿದೆ. ಇವು 40 ನಿಮಿಷಗಳ ವರೆಗೆ ಆಗಸದಲ್ಲಿ ಸುತ್ತುವ ಶಕ್ತಿ ಹೊಂದಿದ್ದು, ಟಾರ್ಗೆಟ್‌ ಗುರುತಿಸಿ ಬಾಂಬ್‌ ಹಾಕುವ ಶಕ್ತಿ ಹೊಂದಿವೆ.
ರಷ್ಯಾ ಮತ್ತು ಉಕ್ರೇನ್‌ ಸಮರವೇನೂ ನಿಲ್ಲುವಂತೆ ಕಾಣಿಸುತ್ತಿಲ್ಲ. ರಷ್ಯಾದ ಆಕ್ರಮಣದಿಂದಾಗಿ ಉಕ್ರೇನ್‌ ಅಕ್ಷರಶಃ ನಲುಗಿಹೋಗಿದೆ. ಇಂಥ ವೇಳೆಯಲ್ಲೇ ಅಮೆರಿಕ, ಉಕ್ರೇನ್‌ಗೆ ಕಾಮಿಕಾಝ್ ಡ್ರೋನ್‌ ನೀಡಲು ಮುಂದಾಗಿದೆ. ಈ ಡ್ರೋನ್‌ಗಳಿಗೆ ಸುಸೈಡ್‌ ಡ್ರೋನ್‌ ಎಂದು ಕರೆಯುವುದು ವಾಡಿಕೆ.
 
ಎರಡು ರೀತಿಯ ಡ್ರೋನ್‌
ಕಾಮಿಕಾಝ್ ಅಥವಾ ಸುಸೈಡ್‌ ಡ್ರೋನ್‌ ಎಂದೇ ಹೆಸರು ಇರಿಸಿಕೊಂಡಿರುವ ಇವು ಎರಡು ರೀತಿಯಲ್ಲಿ ಸಿಗುತ್ತವೆ. ಮಾನವ ರಹಿತ ಡ್ರೋನ್‌ಗಳಾಗಿರುವ ಇವು ಮಿಸೈಲ್‌ಗ‌ಳನ್ನು ಸಿಡಿಸುವುದಿಲ್ಲ. ಆದರೆ ಮಿಸೈಲ್‌ಗಳಂತೆಯೇ ವರ್ತಿಸುತ್ತವೆ. ಇವುಗಳನ್ನು ಅಮೆರಿಕ, ಇರಾಕ್‌, ಅಫ್ಘಾನಿಸ್ಥಾನ, ಸಿರಿಯಾದಲ್ಲಿ ಬಳಕೆ ಮಾಡಿದೆ. ವಾಷಿಂಗ್ಟನ್‌ ಡಿಸಿಯ ಏರೋವಿರೋಮೆಂಟ್‌ ಎಂಬ ಕಂಪೆನಿ ಉತ್ಪಾದಿಸುತ್ತಿದೆ.
 
1.ಸ್ವಿಚ್‌ಬ್ಲೇಡ್‌ 600
ಭೂಮಿಗೆ ಬೀಳುವ ಮುನ್ನ 40 ನಿಮಿಷಗಳ ವರೆಗೆ ಆಗಸದಲ್ಲಿ ಹಾರಾಡುತ್ತವೆ. ಟ್ಯಾಂಕರ್‌ಗಳು ಮತ್ತು ಶಸ್ತ್ರಾಸ್ತ್ರ ನೆಲೆಗಳನ್ನು ಗುರುತಿಸಿ ಗಂಟೆಗೆ 115 ಮೈಲು ವೇಗದಲ್ಲಿ ಬಂದು ಅಪ್ಪಳಿಸುತ್ತವೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ