ಶಾಲೆಯ ಟಾಯ್ಲೆಟ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ!
ಲಕ್ಷ್ಮೀನಾರಾಯಣ ಧನಕ್ ಬಂಧಿತ ಆರೋಪಿ. ಈತ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ. ಈತನನ್ನು 4ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಬಂಧಿಸಲಾಗಿದೆ.
4ನೇ ತರಗತಿಯನ್ನು ಓದುತ್ತಿದ್ದ ವಿದ್ಯಾರ್ಥಿನಿಯು 6 ದಿನಗಳ ಹಿಂದೆ ಶಾಲೆಗೆ ಪ್ರವೇಶ ಪಡೆದಿದ್ದಳು. ಮಧ್ಯಾಹ್ನ ಊಟದ ಸಮಯದಲ್ಲಿ ಈಕೆ ಶೌಚಾಲಯಕ್ಕೆ ಹೋಗಿದ್ದಳು. ಆ ಸಮಯದಲ್ಲಿ ಅಲ್ಲೇ ಇದ್ದ ಆರೋಪಿ ಲಕ್ಷ್ಮೀನಾರಾಯಣ ಆಕೆಯನ್ನು ಶೌಚಾಲಯದೊಳಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಘಟನೆ ಬಳಿಕ ಲಕ್ಷ್ಮೀನಾರಾಯಣ ಪರಾರಿಯಾಗಿದ್ದಾನೆ. ಬಾಲಕಿ ಅಳುತ್ತಿರುವುದನ್ನು ಕಂಡು ಇತರ ವಿದ್ಯಾರ್ಥಿಗಳು ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ.