ಫ್ರಾನ್ಸ್ : ಫ್ರಾನ್ಸ್ ಪ್ರಧಾನಿ ಎಮ್ಯಾನುವೇಲ್ ಮಾಕ್ರನ್ ಈ ವಿಷಯವನ್ನು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಹಂಚಿಕೊಂಡಿದ್ದು, ಭಾರತ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಎರಡೂ ದೇಶಗಳ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವ ಸೂಚನ ನೀಡಿದ್ದಾರೆ. 2030 ರ ವೇಳೆಗೆ ಭಾರತದ ಮೂವತ್ತು ಸಾವಿರ ವಿದ್ಯಾರ್ಥಿಗಳಿಗೆ ಫ್ರಾನ್ಸ್ ನಲ್ಲಿ ವ್ಯಾಸಂಗಾವಕಾಶ ನೀಡುವುದಾಗಿ ಪ್ರಾನ್ಸ್ ಘೋಷಿಸಿದೆ.
ಇದೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಆದರೆ ನಾನು ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಅತ್ಯಂತ ಉತ್ಸಾಹಭರಿತನಾಗಿದ್ದೇನೆ ಎಂದೂ ಎಮ್ಯಾನುವೇಲ್ ಹೇಳಿಕೊಂಡಿದ್ದಾರೆ. ಈ ಯೋಜನೆಯನ್ನು ಕಾರ್ಯರೂಪಗೊಳಿಸುವ ಬಗ್ಗೆಯೂ ಎಮ್ಯಾನುವೇಲ್ ವಿವರಗಳನ್ನು ಎಕ್ಸ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.