ಮಾನವ ಕಳ್ಳಸಾಗಣಿಕೆ ಆರೋಪದ ಮೇಲೆ ಪ್ಯಾರಿಸ್ ವಶಪಡಿಸಿದ್ದ ವಿಮಾನ ಭಾರತಕ್ಕೆ ವಾಪಸ್
ಸುಮಾರು ನಾಲ್ಕು ದಿನಗಳ ಪ್ಯಾರಿಸ್ ಬಳಿ ವ್ರತಿ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ತಡೆಹಿಡಿಯಲಾಗಿತ್ತು. ಎಲ್ಲವೂ ಸರಿಯಾಗಿದ್ದರೆ ನಿನ್ನೆಯೇ ವಿಮಾನ ಮುಂಬೈ ವಿಮಾನ ನಿಲ್ದಾಣಕ್ಕೆ ಬರಬೇಕಾಗಿತ್ತು.
ಆದರೆ ಇದೀಗ ತಡವಾಗಿ ಅಂದರೆ ಇಂದು ಮುಂಜಾನೆ ಮುಂಬೈಗೆ ಬಂದಿಳಿಯಿತು. ವಿಚಾರಣೆ ನಡೆಸಿದ ಬಳಿಕವಷ್ಟೇ ಫ್ರಾನ್ಸ್ ಅಧಿಕಾರಿಗಳು ವಿಮಾನ ಟೇಕ್ ಆಫ್ ಮಾಡಲು ಅನುಮತಿ ನೀಡಿದರು.
ರೊಮೇನಿಯಾ ಲೆಜೆಂಡ್ ಏರ್ ಲೈನ್ಸ್ ಗೆ ಸೇರಿದ ವಿಮಾನದಲ್ಲಿ 303 ಪ್ರಯಾಣಿಕರಿದ್ದರು. ಈ ಪೈಕಿ ಬಹುತೇಕರು ಭಾರತೀಯ ಮೂಲದವರೇ ಆಗಿದ್ದರು. ಕೆಲವರನ್ನು ಮಾನವ ಕಳ್ಳಸಾಗಣಿಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಬಂದ ಹಿನ್ನಲೆಯಲ್ಲಿ ವಿಮಾನವನ್ನು ತಡೆಹಿಡಿಯಲಾಗಿತ್ತು. ಇದು ಅಂತಾರಾಷ್ಟ್ರೀಯಮಟ್ಟದಲ್ಲಿ ಸುದ್ದಿಯಾಗಿತ್ತು.