ಕೆಮ್ಮಿನ ಸಿರಪ್ ಕಂಪನಿಗಳ ಮೇಲೆ `ಮಹಾ’ಅಸ್ತ್ರ?

ಶನಿವಾರ, 4 ಮಾರ್ಚ್ 2023 (11:04 IST)
ಮುಂಬೈ : ನಿಯಮ ಉಲ್ಲಂಘನೆ ಮಾಡಿರುವ ಆರು ಕೆಮ್ಮಿನ ಸಿರಪ್ ತಯಾರಕ ಕಂಪನಿಗಳ ಪರವಾನಗಿ ಅಮಾನತುಗೊಳಿಸಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ವಿಧಾನಸಭೆಯಲ್ಲಿ ಘೋಷಿಸಿದೆ.
 
ಬಿಜೆಪಿ ಶಾಸಕ ಆಶಿಕ್ ಶೇಲಾರ್ ಹಾಗೂ ಇತರರ ನೊಟೀಸ್ಗೆ ಉತ್ತರಿಸಿದ ಆಹಾರ ಮತ್ತು ಔಷಧ ಆಡಳಿತ ಸಚಿವ ಸಂಜಯ್ ರಾಥೋಡ್ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದ ನೋಯ್ಡಾ ಮೂಲದ ಸಂಸ್ಥೆ ತಯಾರಿಸಿದ್ದ ಕೆಮ್ಮಿನ ಸಿರಪ್ನಿಂದ ಕಳೆದ ವರ್ಷ ಉಜ್ಬೇಕಿಸ್ತಾನದ 18 ಮಕ್ಕಳು ಸಾವಿಗೀಡಾಗಿದ್ದರು. ಈ ಪ್ರಕರಣದಲ್ಲಿ ಮೂರು ಸಿಬ್ಬಂದಿಯನ್ನು ಬಂಧಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. 

ಸರ್ಕಾರವು ಕೆಮ್ಮಿನ ಸಿರಪ್ ತಯಾರಿಕಾ ಕಂಪನಿಗಳಲ್ಲಿ 84 ಕಂಪನಿಗಳ ತನಿಖೆ ಆರಂಭಿಸಿದೆ. ನಿಯಮ ಉಲ್ಲಂಘಿಸಿರುವ 17 ಸಂಸ್ಥೆಗಳಿಗೆ ಶೋಕಾಸ್ ನೋಟೀಸ್ ನೀಡಲಾಗಿದೆ ಎಂದಿದ್ದಾರೆ.

ಭಾರತದಿಂದ ರಫ್ತಾಗಿದ್ದ ಕೆಮ್ಮಿನ ಸಿರಪ್ನಿಂದಾಗಿ ಗ್ಯಾಂಬಿಯಾದ 66 ಮಕ್ಕಳು ಮೃತಪಟ್ಟಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ನಿಯಮ ಉಲ್ಲಂಘನೆ ಆರೋಪ ಎದುರಿಸುತ್ತಿರುವ ಕಂಪನಿ ಹರಿಯಾಣ ಮೂಲದ್ದಾಗಿದ್ದು ರಾಜ್ಯದಲ್ಲಿ ಯಾವುದೇ ಉತ್ಪಾದನಾ ಘಟಕ ಹೊಂದಿಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ