ಸರ್ಕಾರಿ ನೌಕರರಿಗೆ ಯುಎಸ್ ಸೂಚನೆ?

ಶುಕ್ರವಾರ, 3 ಮಾರ್ಚ್ 2023 (09:29 IST)
ವಾಷಿಂಗ್ಟನ್ : ಅಮೆರಿಕದ ಫೈಟರ್ ಜೆಟ್ಗಳು ತಮ್ಮ ವಾಯುನೆಲೆಯ ಮೇಲೆ ಹಾರಾಡುತ್ತಿದ್ದ ಚೀನಾ ಬೇಹುಗಾರಿಕಾ ಬಲೂನ್ ಅನ್ನು ಹೊಡೆದುರುಳಿಸಿದ ನಂತರ ಎರಡು ದೈತ್ಯ ಮಿಲಿಟರಿ ರಾಷ್ಟ್ರಗಳ ನಡುವೆ ಶೀತಲ ಸಮರ ಶುರುವಾಗಿದೆ.
 
ಈ ನಡುವೆ ಎಲ್ಲಾ ಸರ್ಕಾರಿ ಡಿವೈಸ್ಗಳಿಂದ ಟಿಕ್ಟಾಕ್ ಅನ್ನು ಡಿಲೀಟ್ ಮಾಡುವಂತೆ ಅಮೆರಿಕ ವೈಟ್ಹೌಸ್ 30 ದಿನಗಳ ಗಡುವು ನೀಡಿದೆ. ಅಮೆರಿಕದ ರಕ್ಷಣಾ ಇಲಾಖೆಗಳು ಈಗಾಗಲೇ ಟಿಕ್ಟಾಕ್ ನಿರ್ಬಂಧಿಸಿವೆ. ಇದೀಗ ರಾಷ್ಟ್ರವ್ಯಾಪಿ ನಿಷೇಧಕ್ಕೆ ಮುಂದಾಗಿದ್ದು, ಇದು ಸರ್ಕಾರಿ ದತ್ತಾಂಶಗಳನ್ನು ರಕ್ಷಿಸುವಲ್ಲಿ ಮತ್ವದ ಹೆಜ್ಜೆ ಎಂದು ಹೇಳಲಾಗಿದೆ. 

ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್ ನೇತೃತ್ವದ ಆಡಳಿತವು ಡಿಜಿಟಲ್ ಮೂಲ ಸೌಕರ್ಯಗಳ ರಕ್ಷಣೆಗೆ ಮಹತ್ವದ ಹೆಜ್ಜೆಯನ್ನಿರಿಸಿದೆ. ಜೊತೆಗೆ ಅಮೆರಿಕದ ಜನರ ಸುರಕ್ಷತೆ ಹಾಗೂ ಗೌಪ್ಯತೆ ರಕ್ಷಿಸಲು ವಿದೇಶಿ ಆಪ್ಗಳ ಪ್ರವೇಶ ತಡೆಯಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಫೆಡರಲ್ ಏಜೆನ್ಸಿಯ ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ ಕ್ರಿಸ್ ಡೆರುಶಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ