ಕೊರೊನಾಕ್ಕೆ ಹೆದರಿ ಮನೆಯೊಳಗೆ ಅಪ್ರಾಪ್ತ ಮಗನೊಂದಿಗೆ ಬಂಧಿಯಾದ ತಾಯಿ!
ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿರುವ ಮಹಿಳೆಯ ಪತಿ ಸುಜನ್ ಮಾಝಿ ಚಕ್ಕರ್ಪುರ ಪೊಲೀಸ್ ಠಾಣೆಗೆ ಸಂಪರ್ಕಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿ ಪೊಲೀಸರು,
ಆರೋಗ್ಯ ಅಧಿಕಾರಿಗಳು ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸದಸ್ಯರ ತಂಡ ನಿವಾಸಕ್ಕೆ ತಲುಪಿ ಮುಖ್ಯ ಬಾಗಿಲನ್ನು ಮುರಿದು, ಮುನ್ಮುನ್ ಮಜ್ಹಿ ಹಾಗೂ ಆಕೆಯ 10 ವರ್ಷದ ಮಗನನ್ನು ರಕ್ಷಿಸಿದ್ದಾರೆ.
ಮುನ್ಮುನ್ ಮಜ್ಹಿ ಮನೆಯಲ್ಲೇ ಮಗುವಿನ ಹಾಗೂ ಅವಳ ಕೂದಲನ್ನು ಕತ್ತರಿಸುತ್ತಿದ್ದಳು. ಅಷ್ಟೇ ಅಲ್ಲದೇ ಮನೆಯಲ್ಲಿ ಗ್ಯಾಸ್ ಸ್ಟೌ ಬದಲು ಇಂಡಕ್ಷನ್ ಮೂಲಕ ಅಡುಗೆ ಮಾಡುತ್ತಿದ್ದರು. 3 ವರ್ಷಗಳಿಂದ ಮನೆಯಲ್ಲಿದ್ದ ಕಸವನ್ನು ಕೂಡ ಹೊರಗೆ ಹಾಕಿರಲಿಲ್ಲ.