ಸಂದರ್ಶನದ ನೆಪದಲ್ಲಿ ಯುವತಿ ಮೇಲೆ ಅತ್ಯಾಚಾರ

ಬುಧವಾರ, 15 ಫೆಬ್ರವರಿ 2023 (09:16 IST)
ಲಕ್ನೋ : ಕೆಲಸಕ್ಕಾಗಿ ಸಂದರ್ಶನ ಮಾಡುವ ನೆಪದಲ್ಲಿ ಕರೆಸಿ, ಮಾದಕ ದ್ರವ್ಯ ನೀಡಿ ಎಂಜಿನಿಯರಿಂಗ್ ಪದವೀಧರೆಯ ಮೇಲೆ ಕಾರಿನಲ್ಲೇ ಅತ್ಯಾಚಾರ ಎಸಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಗುರುಗ್ರಾಮ್ನ ಮಾಲ್ವೊಂದರ ನೆಲಮಾಳಿಗೆಯಲ್ಲಿ ಕಾರಿನಲ್ಲಿ 27 ವರ್ಷದ ಎಂಜಿನಿಯರಿಂಗ್ ಪದವೀಧರ ಯುವತಿಯ ಮೇಲೆ ಕಾಮುಕ ತುಷಾರ್ ಶರ್ಮಾ ಅತ್ಯಾಚಾರ ಎಸಗಿದ್ದಾನೆ. ಆಕೆಗೆ ಕುಡಿಯುವ ನೀರಿನಲ್ಲಿ ನಿದ್ರೆ ಔಷಧಿ ಬೆರಸಿ, ಪ್ರಜ್ಞೆ ತಪ್ಪಿದ ನಂತರ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಗುರುಗ್ರಾಮ್ನ ಸೆಕ್ಟರ್-51ರ ಮಹಿಳಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದು, ತುಷಾರ್ ಶರ್ಮಾ ಎಂಬ ವ್ಯಕ್ತಿ ತನ್ನೊಂದಿಗೆ ಸಂಪರ್ಕ ಹೊಂದಿದ್ದನು. ಕೆಲಸ ಕೊಡಿಸುವುದಾಗಿ ಭರವಸೆಯನ್ನೂ ನೀಡಿದ್ದ ಎಂದು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ