ಚೀನಾ : ವೇಗವಾಗಿ ಹರಡುತ್ತಿರುವ ಕೊರೊನಾ ಹಿನ್ನೆಲೆಯಲ್ಲಿ ಚೀನಾ ಕೈಗಾರಿಕಾ ಕೇಂದ್ರದಲ್ಲಿ ಲಾಕ್ಡೌನ್ ವಿಧಿಸಿದೆ.
9 ಮಿಲಿಯನ್ (90ಲಕ್ಷ) ನಿವಾಸಿಗಳು ಮನೆಯೊಳಗೆ ಇರಲು ಸೂಚನೆ ನೀಡಲಾಗಿದೆ. ಹೊರಡಿಸಿದ ಆದೇಶಗಳ ಪ್ರಕಾರ, ಈಶಾನ್ಯ ಕೈಗಾರಿಕಾ ಕೇಂದ್ರವಾದ ಚಾಂಗ್ಚುನ್ನಲ್ಲಿ 9 ಮಿಲಿಯನ್ ನಿವಾಸಿಗಳಿಗೆ ಲಾಕ್ಡೌನ್ ವಿಧಿಸಿದೆ.
ನಿವಾಸಿಗಳು ತಮ್ಮ ಮನೆಯಿಂದ ಹೊರಗೆ ಬರುವಂತಿಲ್ಲ. ಕೆಲವು ಅನಿವಾರ್ಯತೆಯಿಂದಾಗಿ ಮನೆಯಿಂದ ಹೊರಗೆ ಬರುವವರು ಮೂರು ಸುತ್ತಿನ ಸಾಮೂಹಿಕ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ನಗರ ಅಧಿಕಾರಿಗಳು ಈಗಾಲೇ ಎಲ್ಲಾ ವ್ಯವಹಾರ, ಸಾರಿಗೆ ಸಂಪರ್ಕಗಳನ್ನು ಸಹ ಸ್ಥಗಿತಗೊಳಿಸಿದ್ದಾರೆ.
ಡೋಜೀನ್ ನಗರಗಳಲ್ಲಿ ಪ್ರತಿದಿನ 1,000ಕ್ಕೂ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ಸುಮಾರು 2 ವರ್ಷಗಳ ನಂತರ ಈಚೆಗೆ ಅತಿ ಹೆಚ್ಚು ಹೊಸ ಪ್ರಕರಣಗಳು ಒಂದೇ ದಿನದಲ್ಲಿ ಏರಿಕೆಯಾಗಿದೆ.