ಬಾಲಕಿಯರಿಗೆ 200 ಕೋಟಿ ಗಿಫ್ಟ್ ಕೊಟ್ಟ ಸೂರತ್ ಮೂಲದ ವ್ಯಕ್ತಿ!

ಬುಧವಾರ, 3 ಮೇ 2017 (11:39 IST)
ಸೂರತ್: ಪ್ರಧಾನಿ ಮೋದಿಯವರ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಿಂದ ಪ್ರಭಾವಿತನಾದ ಸೂರತ್ ಮೂಲದ ವ್ಯಕ್ತಿಯೊಬ್ಬ 10 ಸಾವಿರ ಬಾಲಕಿಯರಿಗೆ ಸುಮಾರು 200 ಕೋಟಿ ರೂ ದಾನ ಮಾಡಿದ್ದಾರೆ.

 
ಸೂರತ್ ನ ಪತಿದಾರ್ ಗ್ರಾಮದ ಬಾಲಕಿಯರು ಫಲಾನುಭವಿಗಳು. ಪ್ರಧಾನಿಯ ಊರಿನವರೇ ಆದ ವ್ಯಕ್ತಿ ಉಡುಗೊರೆ ನೀಡಿದಾತ. ಈತನ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

2015 ರಲ್ಲಿ ಪ್ರಧಾನಿ ಮೋದಿ ಹೆಣ್ಣು ಮಕ್ಕಳ ಅವಗಣನೆ ತಡೆಯಲು ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಜಾರಿಗೆ ತಂದಿದ್ದರು. ಹೆಣ್ಣು ಬ್ರೂಣ ಹತ್ಯೆ ತಡೆಯುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ