ಕ್ಷುಲಕ ಕಾರಣಕ್ಕೆ ಪತ್ನಿಯನ್ನು ಹೊಡೆದು ಕೊಂದ ರೆಸ್ಟೋರೆಂಟ್ ಮಾಲೀಕ

ಬುಧವಾರ, 25 ನವೆಂಬರ್ 2020 (06:32 IST)
ತಂಜಾವೂರು : 48 ವರ್ಷದ ರೆಸ್ಟೋರೆಂಟ್ ಮಾಲೀಕ ತನ್ನ ಪತ್ನಿಯನ್ನು ಥಳಿಸಿ ಕೊಂದ ಘಟನೆ ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ನಡೆದಿದೆ.

ವಿಲ್ಲಪ್ಪನ್ ಆರೋಪಿಯಾಗಿದ್ದು, ಈತ ತನ್ನ 40 ವರ್ಷದ ಪತ್ನಿಯ ಜೊತೆ ಯಾವಾಗಲೂ ಜಗಳವಾಡುತ್ತಿದ್ದ. ಅವರ ಇಬ್ಬರು ಹೆಣ್ಣುಮಕ್ಕಳಿಗೆ ಮದುವೆಯಾಗಿದ್ದು, ಮಗ ವಿದೇಶದಲ್ಲಿ ನೆಲೆಸಿದ್ದಾರೆ.  ಭಾನುವಾರ ರಾತ್ರಿ ಇವರ ಜಗಳ ವಿಕೋಪಕ್ಕೆ ತಿರುಗಿ ಕೋಪಗೊಂಡ ಪತಿ ಪತ್ನಿಯ ತಲೆಗೆ ಲಾಂಗ್ ನಿಂದ ಹೊಡೆದಿದ್ದಾನೆ. ಪರಿಣಾಮ ಆಕೆ ಅಲ್ಲಿಯೇ ಮೃತಪಟ್ಟಿದ್ದಾಳೆ.

ಈ ಬಗ್ಗೆ ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ