ಸಾಫ್ಟ್ ವೇರ್ ಎಂಜಿನಿಯರ್ ಅನ್ನು ಜೀವಂತವಾಗಿ ಸುಟ್ಟ ಪತ್ನಿಯ ಕುಟುಂಬಸ್ಥರು

ಬುಧವಾರ, 25 ನವೆಂಬರ್ 2020 (06:24 IST)
ಹೈದರಾಬಾದ್ : ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಕೆಲಸ ಮಾಡುತ್ತಿದ್ದ  ವ್ಯಕ್ತಿಯನ್ನು ಆತನ ಪತ್ನಿಯ ಕುಟುಂಬಸ್ಥರು ಕುರ್ಚಿಗೆ ಕಟ್ಟಿ ಜೀವಂತವಾಗಿ ಸುಟ್ಟ ಘಟನೆ ತೆಲಂಗಾಣದ ಜಗ್ತಿಯಲ್ ಜಿಲ್ಲೆಯ ದೇವಾಲಯದ ಆವರಣದೊಳಗೆ ನಡೆದಿದೆ.

ಪಾಗಿಲ್ಲಾ ಪವನ್ ಕುಮಾರ್ ಮೃತಪಟ್ಟ ವ್ಯಕ್ತಿ. ಈತ ತನ್ನ ಪತ್ನಿಯ ಕುಟುಂಬಸ್ಥರ ಆಹ್ವಾನದ ಮೇರೆಗೆ ಪತ್ನಿಯ ಜೊತೆ ಊರಿಗೆ ಬಂದಿದ್ದಾನೆ. ಆ ವೇಳೆ ಆತನ್ನು ದೇವಾಯಲದ ಆವರಣದೊಳಗೆ ಕುರ್ಚಿಗೆ ಕಟ್ಟಿ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟು ಹಾಕಲಾಗಿದೆ. ಆತನ ಕೂಗು ಕೇಳಿ ದೇವಾಲಯಕ್ಕೆ ಧಾವಿಸಿದ ಸ್ಥಳೀಯರಿಗೆ ವ್ಯಕ್ತಿಯ ಸುಟ್ಟ ಮೃತದೇಹ ಕಾಣಿಸಿದೆ.

ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತನ ಪತ್ನಿಯನ್ನು ವಿಚಾರಿಸಿದಾಗ ತನ್ನ ಅತ್ತಿಗೆ ಮಾಟ ಮಾಡಿಸುತ್ತಿದ್ದು ಅವಳೇ ಈ ಕೃತ್ಯ ಎಸಗಿದ್ದಾಳೆ ಎಂದು ಆರೋಪಿಸಿದ್ದಾಳೆ. ಪೊಲೀಸರು ಇನ್ನು ಆರೋಪಿಗಳನ್ನು ಕಂಡುಹಿಡಿಯಲು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ