ಐ ಬ್ರೊ ಮಾಡಿಸಿಕೊಳ್ಳಲು ಪಾರ್ಲರ್‌ಗೆ ಹೋಗಿದ್ದ ಪತ್ನಿಯ ಜಡೆಯನ್ನೇ ಕತ್ತರಿಸಿದ ಪಾಪಿ ಪತಿ

Sampriya

ಭಾನುವಾರ, 20 ಏಪ್ರಿಲ್ 2025 (11:28 IST)
Photo Courtesy X
ಉತ್ತರ ಪ್ರದೇಶ: ಉತ್ತರ ಪ್ರದೇಶದ ಹಾರ್ದೋಯಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಐ ಬ್ರೊ ಮಾಡಿಸಿಕೊಳ್ಳಲು ಬ್ಯೂಟಿ ಪಾರ್ಲರ್‌ಗೆ ಹೋಗಿದ್ದಕ್ಕೆ ಕೋಪಗೊಂಡ ಪತಿಯೊಬ್ಬ ಆಕೆಯ ಜಡೆಯನ್ನೇ ಕತ್ತರಿಸಿದ ಘಟನೆ ನಡೆದಿದೆ.

ಹಾರ್ದೋಯಿ ಜಿಲ್ಲೆಯ ಸಂದಿ ಪಟ್ಟಣದ ಮೊಹಲ್ಲಾ ಸಾರಮುಲ್ಲಗಂಜ್‌ನಲ್ಲಿ ಈ ಘಟನೆ ಇತ್ತೀಚೆಗೆ ನಡೆದಿದೆ. ಈ ಸಂಬಂಧ ಪತಿ ವಿರುದ್ಧ ಪ್ರಕರಣವೂ ದಾಖಲಾಗಿದೆ. ಮಹಿಳೆಯ ತಂದೆ ತಂದೆ ರಾಧಾಕೃಷ್ಣ ಎನ್ನುವರು ದೂರು ನೀಡಿದ್ದಾರೆ.

ರಾಮ್‌ಪ್ರತಾಪ್ ತನ್ನ ಮಗಳಿಗೆ ನಿರಂತರ ತೊಂದರೆ ಕೊಡುತ್ತಿದ್ದ. ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಈಚೆಗೆ ಇತ್ತೀಚೆಗೆ ಮಗಳು ಐ ಬ್ರೊ ಮಾಡಿಸಿಕೊಳ್ಳಲು ಬ್ಯೂಟಿ ಪಾರ್ಲರ್‌ಗೆ ಹೋಗಿದ್ದಾಗ ಕೋಪಗೊಂಡು ಅವಳ ಜಡೆಯನ್ನು ಕತ್ತರಿಸಿ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿ ರಾಮ್‌ಪ್ರತಾಪ್ ವರದಕ್ಷಿಣೆಗಾಗಿ ಜಡೆ ಕತ್ತರಿಸಿಲ್ಲ. ಹೆಂಡತಿ ಬ್ಯೂಟಿ ಪಾರ್ಲರ್‌ಗೆ ಹೋಗುವುದನ್ನು ಸಹಿಸದೇ ಅವಮಾನಕಾರಿ ಕೃತ್ಯ ಎಸಗಿದ್ದಾನೆ ಎಂದು ಸಂದಿ ಪಟ್ಟಣದ ಪೊಲೀಸ್ ಠಾಣೆಯ ಅಧಿಕಾರಿ ರವಿ ಪ್ರಕಾಶ್ ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ