Viral Video:ರನ್ಯಾ ರಾವ್ ಪ್ಲ್ಯಾನ್‌ಗಿಂತಲೂ ಖತರ್ನಾಕ್ ಆಗಿ ಮದ್ಯದ ಬಾಟಲಿ ಎಗರಿಸಿದ ಮಹಿಳೆ, ನೋಡಿದ್ರೆ ಶಾಕ್ ಆಗ್ತೀರಾ

Sampriya

ಶನಿವಾರ, 19 ಏಪ್ರಿಲ್ 2025 (18:41 IST)
Photo Credit X
ಕತಿಹಾರ್: ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರನ್ನು ತನ್ನ ಬುರ್ಖಾದ ಅಡಿಯಲ್ಲಿ ಮದ್ಯವನ್ನು ಅಕ್ರಮವಾಗಿ ಬಚ್ಚಿಟ್ಟು, ಸಿಕ್ಕಿಬಿದ್ದ ಘಟನೆ ಶುಕ್ರವಾರ ನಡೆದಿದೆ.

ನೆರೆಯ ಪಶ್ಚಿಮ ಬಂಗಾಳದಿಂದ ರಾಜ್ಯಕ್ಕೆ ಮದ್ಯವನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಸುಳಿವಿನ ಮೇರೆಗೆ ಅಬಕಾರಿ ಇಲಾಖೆಯ ತಂಡವು ಕತಿಹಾರ್‌ನ ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮಾನಿಯಾ ಪ್ರದೇಶದಲ್ಲಿ ಅನುಮಾನದ ಆಧಾರದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಿದೆ.

ಮಹಿಳಾ ಕಾನ್‌ಸ್ಟೆಬಲ್‌ಗಳು ಆಕೆಯ ಬುರ್ಖಾವನ್ನು ತೆಗೆಸಿ, ನೋಡಿದಾಗ ಮದ್ಯದ ಪ್ಯಾಕೇಟ್‌ ಅನ್ನು ಟೇಪ್‌ನಿಂದ ತನ್ನ ಹೊಟ್ಟೆಯ ಭಾಗಕ್ಕೆ ಸುತ್ತಿದ್ದಾಳೆ.

ವಿಚಾರಣೆ ವೇಳೆ ಮಹಿಳೆ ತಾನು ಪಶ್ಚಿಮ ಬಂಗಾಳದ ಕುಮೇದ್‌ಪುರ ಪ್ರದೇಶದಿಂದ ಮದ್ಯದ ಪೌಚ್‌ಗಳನ್ನು ತರುತ್ತಿರುವುದಾಗಿ ತಿಳಿಸಿದ್ದಾಳೆ. ದಂಧೆಯಲ್ಲಿ ಭಾಗಿಯಾಗಿರುವ ಇತರರ ಬಗ್ಗೆ ಆಕೆಯನ್ನು ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆಯೊಬ್ಬರು ಮದ್ಯದೊಂದಿಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಯನ್ನು ವೈದ್ಯಕೀಯ ಪರೀಕ್ಷೆಯ ನಂತರ ಜೈಲಿಗೆ ಕಳುಹಿಸಲಾಗಿದೆ ಮತ್ತು ಈ ಸಂಬಂಧ ಪ್ರಕರಣವನ್ನು ದಾಖಲಿಸಲಾಗಿದೆ. ತನಿಖೆಯನ್ನು ಪ್ರಾರಂಭಿಸಲಾಗಿದೆ ಮತ್ತು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಕತಿಹಾರ್ ಅಬಕಾರಿ ಅಧೀಕ್ಷಕ ಸುಭಾಷ್ ಕುಮಾರ್ ಸಿಂಗ್ ತಿಳಿಸಿದ್ದಾರೆ.





In Bihar’s dry state, liquor smugglers never cease to surprise. From oil tankers to luxury cars, smugglers have tried it all but this one takes it to another level. In Katihar, the Excise Department caught a woman, Sandhya Devi, smuggling liquor cleverly hidden beneath her burqa. pic.twitter.com/5261SFV9LQ

— LocalTak™ (@localtak) April 18, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ