ಔಷಧ ಕೇಳಿದಕ್ಕೆ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪಾಪಿ!

ಬುಧವಾರ, 26 ಜನವರಿ 2022 (14:20 IST)
ನವದೆಹಲಿ : ತಾಯಿಗೆ ಹುಷಾರಿಲ್ಲವೆಂದು ಸಹಾಯ ಕೇಳಿದ ಅಪ್ರಾಪ್ತ ಬಾಲಕಿ ಮೇಲೆ ನೆರೆಮನೆಯ ವ್ಯಕ್ತಿ ಅತ್ಯಾಚಾರವೆಸಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಈ ಘಟನೆ ಜನವರಿ 22ರಂದು ಸಂಭವಿಸಿದ್ದು, ಮರುದಿನ ದೆಹಲಿಯ ಪಾಂಡವ್ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಬಾಲಕಿ ದೂರು ದಾಖಲಿಸಿದ್ದಾಳೆ.

ಗ್ರಾಮಕ್ಕೆ ಹೋಗಿದ್ದ ಬಾಲಕಿ ತನ್ನ ಅನಾರೋಗ್ಯ ಪೀಡಿತ ತಾಯಿಯೊಂದಿಗೆ ಮನೆಯಲ್ಲಿ ಒಬ್ಬಳೆ ಇದ್ದಳು. ತಾಯಿಯ ಆರೋಗ್ಯ ತೀರಾ ಹದಗೆಟ್ಟಿದ್ದರಿಂದ ಬಾಲಕಿ ನೆರೆಹೊರೆಯವರ ಬಳಿ ಸಹಾಯ ಕೇಳಿದ್ದಾಳೆ. 

ಈ ವೇಳೆ ಔಷಧಿ ಕೊಡಿಸಿ ಸಹಾಯ ಮಾಡುವ ನೆಪದಲ್ಲಿ ಆರೋಪಿ ಬಾಲಕಿಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಇದಲ್ಲದೇ ಆಕೆಗೆ ಈ ವಿಚಾರ ಹೊರಗೆ ಹೇಳಿದರೆ, ಕೊಲ್ಲುವುದಾಗಿ ಬೆದರಿಕೆಯೊಡ್ಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ