ಸಿಂಗಾಪುರದಲ್ಲಿ ಪತ್ನಿಗೆ ಚಿನ್ನದ ಸರ ಖರೀದಿಸಿದ್ದ ತಮಿಳುನಾಡಿನ ವ್ಯಕ್ತಿಗೆ ಲಕ್ಕಿ ಡ್ರಾದಲ್ಲಿ ₹8 ಕೋಟಿ ಬಹುಮಾನ
ಅದೃಷ್ಟದಿಂದ ಬಾಲಸುಬ್ರಹ್ಮಣ್ಯಂ ಚಿತಾಂಬರಂ ಅವರು ಡ್ರಾದಲ್ಲಿ ಗೆದ್ದಿದ್ದಾರೆ. ಈ ವಿಚಾರವನ್ನು ಮುಸ್ತಫಾ ಜುವೇಲರಿ ಅವರು ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ.
ನನ್ನ ತಂದೆಯ ಪುಣ್ಯಸ್ಮರಣೆಯಂದೇ ನನಗೆ ಈ ಬಹುಮಾನ ಬಂದಿದೆ. ಹಣವನ್ನು ಒಳ್ಳೆಯ ಉದ್ದೇಶಕ್ಕೆ ಬಳಸುತ್ತೇನೆ ಎಂದು ತಮಿಳುನಾಡು ಮೂಲದ ಬಾಲಸುಬ್ರಹ್ಮಣ್ಯಂ ಚಿತಾಂಬರಂ ಹೇಳಿದ್ದಾರೆ.