1 ವರ್ಷದಿಂದ ವಿದಾರ್ಥಿನಿಯ ಮೇಲೆ ರೇಪ್ ಎಸಗುತ್ತಿದ್ದ ಶಿಕ್ಷಕ ಅರೆಸ್ಟ್

ಬುಧವಾರ, 29 ನವೆಂಬರ್ 2023 (12:27 IST)
ಮನೆಯಲ್ಲಷ್ಟೇ ಅಲ್ಲದೆ ಶಾಲೆಯಲ್ಲಿಯೂ ಕೂಡ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬುದಾಗಿ ಬಾಲಕಿ ಆರೋಪಿಸಿದ್ದು, ಆಕೆ ನೀಡಿರುವ ಹೇಳಿಕೆಗಳ ಆಧಾರದ ಮೇಲೆ ಪೊಲೀಸರು ಆರೋಪಿ ಶಿಕ್ಷಕನ ವಿರುದ್ಧ ಪೋಸ್ಕೋ ಕಾಯಿದೆಯಡಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 
 
ಮನೆಗೆಲಸದ ನೆಪ ಹೇಳಿ 13 ವರ್ಷದ ಬಾಲಕಿಯೋರ್ವಳನ್ನು ಕರೆಸಿಕೊಳ್ಳುತ್ತಿದ್ದ ಜಿಲ್ಲೆಯ ಶಿಕ್ಷಕ ಮಹಾಶಯನೋರ್ವ ಆಕೆಯ ಮೇಲೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ಅತ್ಯಾಚಾರ ಎಸಗಿರುವ ಪ್ರಕರಣ ಪ್ರಸ್ತುತ ಬೆಳಕಿಗೆ ಬಂದಿದೆ. 
 
ಅತ್ಯಾಚಾರ ಎಸಗಿದ ಮಾನಗೇಡಿ ಶಿಕ್ಷಕ,  ತನ್ನ ಮನೆಗೆಲಸಕ್ಕಾಗಿ 13 ವರ್ಷದ ಬಾಲಕಿಯನ್ನು ನೇಮಿಸಿಕೊಂಡಿದ್ದ. ಬಳಿಕ ಕೆಲಸ ನಿರ್ವಹಿಸಲು ಬರುತ್ತಿದ್ದ ಆ ಬಾಲಕಿಯ ಮೇಲೆ ಒಂದು ವರ್ಷಕ್ಕೂ ಅಧಿಕ ಅವಧಿಯಲ್ಲಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. 
 
ಇನ್ನು ಶಿಕ್ಷಕನ ಕಿರುಕುಳಕ್ಕೆ ಬೇಸತ್ತ ಬಾಲಕಿ ಶಾಲೆಗೆ ತೆರಳಲು ನಿರಾಕರಿಸುತ್ತಿದ್ದಳು ಎನ್ನಲಾಗಿದ್ದು, ಶಾಲೆಗೆ ಹೋಗದಿರಲು ಕಾರಣವೇನು ಎಂದು ಬಾಲಕಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಇನ್ನು ಪ್ರಕರಣ ದಾಖಲಾಗಿದೆ ಎಂದು ತಿಳಿದ ಶಿಕ್ಷಕ ಪ್ರಸ್ತುತ ಪರಾರಿಯಾಗಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದ್ದು, ಆರೋಪಿ ಶಿಕ್ಷಕನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ