ದೆಹಲಿ ಪೊಲೀಸರು ಶುಕ್ರವಾರ ಪ್ರಸಕ್ತ ಸಾಲಿನಲ್ಲಿ ನಡೆದ ಅಪರಾಧಗಳ ವಾರ್ಷಿಕ ದತ್ತಾಂಶವನ್ನು ಬಿಡುಗಡೆಗೊಳಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಪರಾಧ ಪ್ರಕರಣಗಳಲ್ಲಿ ಇಳಿಮುಖವಾಗಿದೆ. ಆದರೆ ವಾಹನ ಕಳವು ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
2015ಕ್ಕೆ ಹೋಲಿಸಿದರೆ 2016ರಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಹೇಳಿಕೊಳ್ಳುವ ಮಟ್ಟದಲ್ಲಿ ಅಲ್ಲವಾದರೂ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡು ಬಂದಿದೆ. 2015ರಲ್ಲಿ 2,069 ರೇಪ್ ಕೇಸ್ ದಾಖಲಾಗಿದ್ದರೆ 2016ರಲ್ಲಿ ಅದರ ಸಂಖ್ಯೆ 2029. ಈ ಪೈಕಿ ಇತ್ಯರ್ಥಗೊಂಡಿರುವ ಪ್ರಕರಣಗಳು ಕೇವಲ 1,744.
ಆದರೆ ವಾಹನ ಕಳ್ಳತನ ಮಾತ್ರ ದಿನಗಳೆದಂತೆ ಚಿಂತಾಜನಕವಾಗಿ ಏರಿಕೆಯಾಗುತ್ತಿದೆ. 2015ರಲ್ಲಿ 36,137 ವಾಹನ ಕಳವಾಗಿದ್ದರೆ, 2016ರಲ್ಲಿ ಹೆಚ್ಚುವರಿಯಾಗಿ 5,250 ಪ್ರಕರಣಗಳು ದಾಖಲಾಗಿವೆ.