ಲೈಂಗಿಕ ಕ್ರಿಯೇ ನಂತರ ವ್ಯಕ್ತಿಯನ್ನು ಹತ್ಯೆಗೈದು ಮಹಿಳೆ ಪರಾರಿ

ಗುರುವಾರ, 23 ನವೆಂಬರ್ 2023 (13:14 IST)
ರಾಜಸ್ಥಾನದ ಸಾವೈ ಮಾಧೋಪುರ್ ಜಿಲ್ಲೆಯ ನಿವಾಸಿಯಾದ ಗಜಾನನ್, ವೃತ್ತಿಯಿಂದ ಅರ್ಚಕ ಮತ್ತು ಜ್ಯೋತಿಷಿಯಾಗಿದ್ದಾನೆ. ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡ ನಂತರ ಹತ್ಯೆಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
53 ವರ್ಷ ವಯಸ್ಸಿನ ವ್ಯಕ್ತಿಯೊಂದಿಗೆ ಸೆಕ್ಸ್‌ನಲ್ಲಿ ಭಾಗಿಯಾದ ಮಹಿಳೆಯೊಬ್ಬಳು, ನಂತರ ಆತನಿಗೆ ಬೆಂಕಿ ಹಚ್ಚಿ ಪರಾರಿಯಾದ ಘಟನೆ ದೆಹಲಿಯಲ್ಲಿ ನಡೆದಿದೆ.
 
ಕೋಣೆಯಲ್ಲಿ 53 ವರ್ಷ ವಯಸ್ಸಿನ ಗಜಾನನ ಎನ್ನುವ ವ್ಯಕ್ತಿಯ ಸುಟ್ಟ ನಗ್ನ ದೇಹ ಪತ್ತೆಯಾಗಿದ್ದು, ಆತನಿಗೆ ಬೆಂಕಿ ಹಚ್ಚಿದ ಮಹಿಳೆ ನಾಪತ್ತೆಯಾಗಿದ್ದಾಳೆ. ಘಟನೆಗೂ ಮುನ್ನ ಇಬ್ಬರು ಸೆಕ್ಸ್‌ನಲ್ಲಿ ಭಾಗಿಯಾಗಿದ್ದರು ಎನ್ನುವುದಕ್ಕೆ ಸಾಕ್ಷಿಗಳು ದೊರೆತಿವೆ ಎನ್ನಲಾಗಿದೆ.
 
ಸುಟ್ಟಗಾಯಗಳಿಂದ ಬಳಲುತ್ತಿದ್ದ ಗಜಾನನನನ್ನು, ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾನೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. 
 
ಘಟನೆಗೆ ಸಂಬಂಧಿಸಿದಂತೆ ನಾಪತ್ತೆಯಾದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ