ಉಗ್ರರಿಗೆ ಹಣಕಾಸು, ಕಪ್ಪುಹಣ ಟ್ರ್ಯಾಕ್ ಮಾಡಲು ಪ್ಯಾನ್ ಕಾರ್ಡ್`ಗೆ ಆಧಾರ್ ಲಿಂಕ್: ಸುಪ್ರೀಂಕೋರ್ಟ್`ಗೆ ಕೇಂದ್ರದ ಸ್ಪಷ್ಟನೆ

ಮಂಗಳವಾರ, 2 ಮೇ 2017 (21:05 IST)
ಭಯೋತ್ಪಾದನೆಗೆ ಹಣಕಾಸು ನೆರವು ನೀಡಲು ಮತ್ತು ಕಪ್ಪುಹಣದ ವ್ಯವಹಾರಕ್ಕೆ ಬಳಸಲಾಗುತ್ತಿರುವ ನಕಲಿ ಪ್ಯಾನ್ ಕಾರ್ಡ್`ಗಳನ್ನ ಕಿತ್ತೊಗೆಯಲು ಪ್ಯಾನ್ ಕಾರ್ಡ್`ಗೆ ಆಧಾರ್ ಲಿಂಕ್ ಮಾಡಲಾಗುತ್ತಿದೆ ಎಂದು ಸುಪ್ರೀಂಕೋರ್ಟ್`ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಇದರಿಂದ ವೈಯಕ್ತಿಕ ಗೌಪ್ಯತೆಗೆ ಧಕ್ಕೆಯಾಗುತ್ತದೆ ಎಂಬುದು ಬೋಗಸ್. ಸುಭದ್ರ ಮತ್ತು ಧೃಡವಾದ ಆರ್ಥಿಕ ವ್ಯವಸ್ಥೆಗೆ ಇದನ್ನ ಜಾರಿ ಮಾಡಿದ್ದೇವೆ. ಇದರಿಂದ ಒಬ್ಬ ಮನುಷ್ಯನ ಗುರುತನ್ನ ನಕಲು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಪ್ರಸ್ತುತ ಕಪ್ಪುಹಣವನ್ನ ಮಾದಕವಸ್ತು ಮತ್ತು ಭಯೋತ್ಪಾದನೆಗೆ ಬಳಸಲಾಗುತ್ತಿದೆ. ಹೀಗಾಗಿ, ಮತ್ತಷ್ಟು ಧೃಡ ವ್ಯವಸ್ಥೆ ಜಾರಿಗೆ ನಿರ್ಧರಿಸಲಾಗಿದೆ ಎಂದು ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ