ದೆಹಲಿಯಲ್ಲಿ ಇಂದು ಅಭಿನಂದನ್ ದೈಹಿಕ ಹಾಗೂ ಮಾನಸಿಕ ತಪಾಸಣೆ

ಶನಿವಾರ, 2 ಮಾರ್ಚ್ 2019 (11:34 IST)
ನವದೆಹಲಿ : ಪಾಕ್ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಶುಕ್ರವಾರ ರಾತ್ರಿ  ತಾಯ್ನಾಡಿಗೆ ವಾಪಾಸಾಗಿದ್ದು, ದೆಹಲಿಯಲ್ಲಿ ಇಂದು  ಅವರ  ಸಂಪೂರ್ಣ ವೈದ್ಯಕೀಯ ತಪಾಸಣೆಯ ಜೊತೆಗೆ ಗೌರವಯುತವಾದ ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ.


ಶತ್ರು ರಾಷ್ಟ್ರವನ್ನು ಹಿಮ್ಮೆಟ್ಟಿಸುವ ವೇಳೆ ಪಾಕ್ ವಶವಾದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು 2 ದಿನ ತಮ್ಮ ಕಪಿಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡು ಇದೀಗ ಬಿಡುಗಡೆ ಮಾಡಿದೆ. ಈ ಹಿನ್ನಲೆಯಲ್ಲಿ  ಭಾರತೀಯ ಸೇನೆ ಅವರನ್ನು ವಿಚಾರಣೆಗೆ ಒಳಪಡಿಸಲಿದೆ. ಶತ್ರುರಾಷ್ಟ್ರ ದೈಹಿಕವಾಗಿ ಅಲ್ಲದೆ ಮಾನಸಿಕವಾಗಿ ಕಿರುಕುಳ ನೀಡಿದ್ಯಾ ಅಂತ ತಪಾಸಣೆ ನಡೆಸುತ್ತಾರೆ.


ವಾಯುಸೇನೆ ಅಧಿಕಾರಿಗಳು ವಾಯುಸೇನೆಯ ಗುಪ್ತಚರ ಘಟಕಕ್ಕೆ ಕರೆದೊಯ್ಯು, ಫಿಟ್‍ನೆಸ್ ಸೇರಿ, ಸಾಕಷ್ಟು ವೈದ್ಯಕೀಯ ಪರೀಕ್ಷೆ ನಡೆಸುತ್ತದೆ. ದೇಹದಲ್ಲಿ ಯಾವುದಾದರೂ ಟ್ರ್ಯಾಕಿಂಗ್ ಡಿವೈಸ್ ಇದೆಯೇ ಅಂತ ಸ್ಕ್ಯಾನಿಂಗ್ ಮಾಡ್ತಾರೆ. ಹಾಗೇ ಹೆಚ್ಚಿನ ತನಿಖೆಗಾಗಿ ಗುಪ್ತಚರ ಇಲಾಖೆಗೆ ಅಥವಾ ರಾ ಸಂಸ್ಥೆಗೆ ಹಸ್ತಾಂತರಿಸಬಹುದು. ನಮ್ಮ ದೇಶದ ಗುಪ್ತ ವಿಚಾರವನ್ನು ವೈರಿರಾಷ್ಟ್ರಕ್ಕೆ ಬಿಟ್ಟುಕೊಟ್ಟಿದ್ದಾರೆಯೇ ಅಂತ ವಿಚಾರಣೆ ನಡೆಸಬಹುದು. ಹಾಗೂ ಶತ್ರುರಾಷ್ಟ್ರದ ರಹಸ್ಯವೇನಾದರೂ ತಿಳಿದಿದ್ದರೆ ನಮಗೆ ತಿಳಿಸಿ ಅಂತ ಕೇಳುವ ಸಾಧ್ಯತೆಗಳಿವೆ. ಅಲ್ಲದೇ ಮುಂದೆ ಅವರು ಸೇನೆಯಲ್ಲಿ ಕಾರ್ಯ ನಿರ್ವಹಿಸಬಹುದೇ ಎಂಬುದರ ಬಗ್ಗೆ ಚರ್ಚಿಸಲಾಗುವುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ