ಕಾಲೇಜು ವಿದ್ಯಾರ್ಥಿನಿಯ ಮೇಲೆ ನಿರಂತರ ಅತ್ಯಾಚಾರವೆಸಗಿದ ಆರೋಪಿ ಅರೆಸ್ಟ್

ಸೋಮವಾರ, 4 ಡಿಸೆಂಬರ್ 2023 (11:11 IST)
ಕ್ಯಾಂಟಿನ್‌ಗೆ ಆಗಮಿಸಿದ್ದ ವಿದ್ಯಾರ್ಥಿನಿಗೆ ಜ್ಯುಸ್‌ನಲ್ಲಿ ಮತ್ತುಬರಿಸುವ ಔಷಧಿ ಕುಡಿಸಿ ವಿದ್ಯಾರ್ಥಿನಿಯನ್ನು ಅಪಹರಿಸಿ, ಒತ್ತೆಯಾಳಾಗಿ ಇರಿಸಿಕೊಂಡು ನಿರಂತರ ಅತ್ಯಾಚಾರಗೈದಿದ್ದಾನೆ.. ಆರೋಪಿ ಮಲಗಿದ್ದಾಗ ವಿದ್ಯಾರ್ಥಿನಿ ಅಲ್ಲಿಂದ ಪಾರಾಗಿ ಮನೆಗೆ ತೆರಳಿ ಘಟನೆಯನ್ನು ವಿವರಿಸಿದ್ದಾಳೆ. ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
 
ಪಾಲಿಟೆಕ್ನಿಕ್ ಕಾಲೇಜಿನ ಕ್ಯಾಂಟಿನ್‌ನ ಮಾಲೀಕನೊಬ್ಬ ಕಾಲೇಜಿನಲ್ಲಿ ಓದುತ್ತಿರುವ 20 ವರ್ಷ ವಯಸ್ಸಿನ ವಿದ್ಯಾರ್ಥಿನಿಯನ್ನು ಸುಮಾರು ತಿಂಗಳುಗಳ ಕಾಲ ಒತ್ತಾಯಳಾಗಿ ಇರಿಸಿಕೊಂಡು ಪ್ರತಿನಿತ್ಯ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆ ವರದಿಯಾಗಿದೆ.
 
ಆರೋಪಿಯ ಹಿಡಿತದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ವಿದ್ಯಾರ್ಥಿನಿ ಪೊಲೀಸ್ ಠಾಣೆಗೆ ದೂರು ನೀಡಿದ ಒಂದು ದಿನದ ನಂತರ, 33 ವರ್ಷ ವಯಸ್ಸಿನ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
 
ಕಳೆದ ಏಪ್ರಿಲ್ 2012ರಲ್ಲಿ ಆರೋಪಿ ಸಿಂಗ್ ವಿದ್ಯಾರ್ಥಿನಿಯನ್ನು ನಗರದ ಹಳೆಭಾಗವಾದ ರಿಯಾಸತ್ ನಗರದಲ್ಲಿರುವ ಮನೆಯೊಂದರಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದನು.. ಪೊಲೀಸರಿಗೆ ಮಾಹಿತಿ ದೊರೆಯಬಾರದು ಎನ್ನುವ ಉದ್ದೇಶದಿಂದ ನಗರದ ಇತರ ಹೊರಭಾಗಗಳಲ್ಲಿರುವ ಪ್ರದೇಶಗಳಲ್ಲಿ ಮನೆ ಬಾಡಿಗೆ ಪಡೆದು ವಾಸಸ್ಥಳವನ್ನು ಬದಲಾಯಿಸುತ್ತಿದ್ದನು. ಒಂದು ಬಾರಿ ಗರ್ಭಪಾತವನ್ನು ಕೂಡಾ ಮಾಡಿಸಿದ್ದನು ಎಂದು ಅತ್ಯಾಚಾರಕ್ಕೊಳಗಾದ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
 
ಆರೋಪಿ ಸಿಂಗ್ ವಿರುದ್ಧ ಅಪಹರಣ, ಅತ್ಯಾಚಾರ, ಲೈಂಗಿಕ ಕಿರುಕುಳ ಸೇರಿದಂತೆ ಇತರ ಪ್ರಕರಣಗಳನ್ನು ದಾಖಲಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ