ಭಾರೀ ಏರಿಕೆ ಕಂಡ ಅದಾನಿ ಎಂಟರ್ಪ್ರೈಸ್ ಷೇರು

ಶನಿವಾರ, 27 ಮೇ 2023 (15:34 IST)
ಮುಂಬೈ : ಹಿಂಡೆನ್ಬರ್ಗ್ ಸಂಶೋಧನಾ ವರದಿಯಿಂದ ಪಾತಾಳ ಕಂಡಿದ್ದ ಅದಾನಿ ಸಮೂಹ ಕಂಪನಿಗಳ ಷೇರುಗಳು ಈಗ ಮೇಲಕ್ಕೆ ಏರುತ್ತಿದೆ. ಅದರಲ್ಲ ಅದಾನಿ ಎಂಟರ್ಪ್ರೈಸ್ ಷೇರು ರಾಕೆಟ್ ವೇಗದಲ್ಲಿ ಮೇಲೇಳುತ್ತಿದೆ.
 
ಅದಾನಿ ಸಮೂಹ ಯಾವುದೇ ರೀತಿಯಲ್ಲೂ ಷೇರಿನ ಬೆಲೆಗಳನ್ನು ತಿರುಚಿಲ್ಲ. ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ಕಡೆಯಿಂದಲೂ ಯಾವುದೇ ನಿಯಂತ್ರಣ ವೈಫಲ್ಯವೂ ಕಂಡುಬಂದಿಲ್ಲ ಎಂದು ಸುಪ್ರೀಂ ನೇಮಿಸಿದ ಸಮಿತಿಯ ವರದಿ ಶುಕ್ರವಾರ ಪ್ರಕಟಗೊಂಡ ಬೆನ್ನಲ್ಲೇ ಅದಾನಿ ಕಂಪನಿಗಳ ಷೇರುಗಳ ಬೆಲೆ ಸೋಮವಾರದಿಂದ ಏರಿಕೆಯಾಗುತ್ತಿದೆ.

ಅದಾನಿ ಎಂಟರ್ಪ್ರೈಸ್ ಷೇರು ಬೆಲೆ ಇಂದು ಒಂದೇ ದಿನ 307 ರೂ. ಏರಿಕೆ ಕಂಡು ಕೊನೆಗೆ 2,333.70 ರೂ.ನಲ್ಲಿ ವ್ಯವಹಾರ ಮುಗಿಸಿದೆ. ಶುಕ್ರವಾರ 1956 ರೂ.ನಲ್ಲಿ ಕೊನೆಯಾಗಿದ್ದರೆ ಎರಡು ದಿನದ ವ್ಯವಹಾರದಲ್ಲಿ 677 ರೂ. ಏರಿಕೆಯಾಗಿದೆ. 

1 ಷೇರಿನ ಬೆಲೆ ಎಷ್ಟು ಏರಿಕೆ?
ಇಂದಿನ ವ್ಯವಹಾರದಲ್ಲಿ ಅದಾನಿ ಟ್ರಾನ್ಸ್ಮಿಷನ್ ಒಂದು ಷೇರಿನ ಬೆಲೆ 41 ರೂ., ಅದಾನಿ ಗ್ರೀನ್ ಎನರ್ಜಿ ಬೆಲೆ 47 ರೂ. ಏರಿಕೆಯಾಗಿದೆ. ಅದಾನಿ ಪವರ್ 12 ರೂ., ಅದಾನಿ ಪೋರ್ಟ್ 8 ರೂ. ಏರಿಕೆಯಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ