ಲಿವಿಂಗ್ ಟುಗೆದರ್ ಗೆ ಯಾರಪ್ಪನ ಒಪ್ಪಿಗೆಯೂ ಬೇಡ: ಕೋರ್ಟ್

ಬುಧವಾರ, 30 ಡಿಸೆಂಬರ್ 2020 (09:43 IST)
ನವದೆಹಲಿ: ಪ್ರಾಯಪೂರ್ತಿಯಾದ ಗಂಡು-ಹೆಣ್ಣು ಜೊತೆಯಾಗಿರಲು ಯಾರೂ ಅಡ್ಡಿ ಮಾಡುವಂತಿಲ್ಲ ಎಂದು ಅಲಹಾಬಾದ್ ಕೋರ್ಟ್ ಆದೇಶ ನೀಡಿದೆ.


ಮದುವೆ ವಯಸ್ಸಿಗೆ ಬಂದ ಒಂದು ಹೆಣ್ಣು, ಗಂಡು ಕಾನೂನಿನ ಚೌಕಟ್ಟಿನಲ್ಲಿ ಜೊತೆಯಾಗಿರುವುದಕ್ಕೆ ಯಾರ ಒಪ್ಪಿಗೆಯೂ ಬೇಕಾಗಿಲ್ಲ ಎಂದು ಕೋರ್ಟ್ ಹೇಳಿದೆ. ಇಬ್ಬರು ಹೇಗೆ ಜೀವನ ಮಾಡಬೇಕೆಂದು ಸಮಾಜ ನಿರ್ಧರಿಸುವಂತಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ವೈಯಕ್ತಿಕ ಬದುಕಿನ ಹಕ್ಕಿದೆ ಎಂದು ಸಂವಿಧಾನವೇ ಹೇಳಿದೆ. ಪೋಷಕರೂ ತಮ್ಮ ಪ್ರಾಯಪೂರ್ತಿಯಾದ ಮಕ್ಕಳು ಹೇಗೆ ಬದುಕಬೇಕೆಂದು ಅಧಿಕಾರ ಚಲಾಯಿಸುವಂತಿಲ್ಲ ಎಂದು ಕೋರ್ಟ್ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ