ಭೋಪಾಲ್‌ಗೆ ಪ್ರಧಾನಿ ಭೇಟಿ: ಅಫ್ಘನ್ ಉಗ್ರರ ಕರೆಗೆ ಬೆಚ್ಚಿಬಿದ್ದ ಭೋಪಾಲ್ ನಿವಾಸಿಗಳು

ಗುರುವಾರ, 13 ಅಕ್ಟೋಬರ್ 2016 (18:46 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರದಂದು ಭೇಟಿ ನೀಡುತ್ತಿರುವ ಮಧ್ಯೆಯೇ ಮಧ್ಯಪ್ರದೇಶದ ಭೋಪಾಲ್ ನಿವಾಸಿಗಳಿಗೆ ಅಫ್ಘಾನಿಸ್ತಾನದಿಂದ ಉಗ್ರರ ಕರೆಗಳು ಬಂದಿರುವುದು ಬೆಚ್ಚಿ ಬೀಳಿಸಿದೆ.
 
ಟೆರರಿಸ್ಟ್ ಎನ್ನುವ ಹೆಸರಿನಲ್ಲಿ (093729864241) ಈ ನಂಬರ್‌ನಿಂದ ಕರೆ ಬಂದಿದ್ದು ಅದಕ್ಕೆ ಅಫ್ಘಾನಿಸ್ತಾನ ಕೋಡ್ (+93) ಸೇರಿಸಲಾಗಿದೆ.  
 
ನಾಳೆ ಭೋಪಾಲ್‌ ನಗರಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ, ಯುದ್ಧ ಸ್ಮಾರಕವನ್ನು ಉಧ್ಘಾಟಿಸುವುದಲ್ಲದೇ ಮಾಜಿ ಸೈನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
 
ಸುಮಾರು ಸಾವಿರಾರು ಜನರು ಇದೊಂದು ಸ್ಪಮ್ ಕರೆ ಎಂದು ಭಾವಿಸಿದ್ದಾರೆ. ಗುಪ್ತಚರ ದಳದ ಹಿರಿಯ ಅಧಿಕಾರಿಗೆ ಕೂಡಾ ಇಂತಹ ಕರೆ ಬಂದಿವೆ, 
 
ಏತನ್ಮಧ್ಯೆ, ಕೇಂದ್ರ ಗೃಹ ಸಚಿವಾಲಯ ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯನ್ನು ನೀಡಿ ಕಟ್ಟೆಚ್ಚರ ವಹಿಸುವಂತೆ ಆದೇಶ ನೀಡಿದೆ. 
 
ಗುಪ್ತಚರ ದಳದ ಅಧಿಕಾರಿಗಳು ಅಫ್ಘನ್ ಮೊಬೈಲ್ ಕರೆಯ ಬಗ್ಗೆ ತನಿಖೆ ಆರಂಭಿಸಿದ್ದು, ಮೂರು ಟೆಲಿಕಾಂ ಕಂಪೆನಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
 
ಆದಾಗ್ಯ, ಪ್ರಧಾನಿ ಮೋದಿಯವರ ಭೇಟಿಗೂ ಮತ್ತು ಅಫ್ಘನ್‌ನಿಂದ ಬಂದ ಕರೆಗಳಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಭಯೋತ್ಪಾದನೆ ನಿಗ್ರಹ ದಳ ಸ್ಪಷ್ಟಪಡಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ