ಐಡಿಯಾ-ವೊಡಾಫೋನ್ ಆಯ್ತು.. ಇನ್ನೀಗ ಫ್ಲಿಪ್ ಕಾರ್ಟ್-ಸ್ನ್ಯಾಪ್ ಡೀಲ್ ಸರದಿ?!

ಮಂಗಳವಾರ, 28 ಮಾರ್ಚ್ 2017 (10:44 IST)
ನವದೆಹಲಿ: ಇತ್ತೀಚೆಗಷ್ಟೇ ದೇಶದ ಎರಡು ಪ್ರತಿಷ್ಠಿತ ಟೆಲಿಕಾಂ ಸಂಸ್ಥೆಗಳಾದ ಐಡಿಯಾ-ವೊಡಾಫೋನ್ ಸಂಸ್ಥೆಗಳು ವಿಲೀನವಾಗಿ ಸುದ್ದಿ ಮಾಡಿತ್ತು. ಇದೀಗ ಆನ್ ಲೈನ್ ಮಾರಾಟಗಾರ ಸಂಸ್ಥೆಗಳಾದ ಸ್ನ್ಯಾಪ್ ಡೀಲ್-ಫ್ಲಿಪ್ ಕಾರ್ಟ್ ಒಂದಾಗುವ ಸುದ್ದಿ ಕೇಳಿಬರುತ್ತಿವೆ.

 

ಜಪಾನ್ ಮೂಲದ ಸಾಫ್ಟ್ ಬ್ಯಾಂಕ್ ಇವೆರಡೂ ದಿಗ್ಗಜರನ್ನು ಒಟ್ಟುಗೂಡಿಸುವ ಯತ್ನ ನಡೆಸುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಈ ವಿಲೀನಗೊಳಿಸಿದ ಸಂಸ್ಥೆಯಲ್ಲಿ ಸಾಫ್ಟ್ ಬ್ಯಾಂಕ್ ಭಾರೀ ಮೊತ್ತದ ಶೇರು ಹೂಡಿಕೆ ಮಾಡುವ ತಯಾರಿ ನಡೆಸಿದೆ ಎನ್ನಲಾಗಿದೆ.

 
ಸದ್ಯ ಕೊಂಚ ನಷ್ಟದಲ್ಲಿರುವ ಸ್ನ್ಯಾಪ್ ಡೀಲ್ ಸಂಸ್ಥೆಗೆ ಇದರಿಂದ ಲಾಭವಾಗುವ ನಿರೀಕ್ಷೆಯಿದೆ. ಅಲ್ಲದೆ ಇವೆರಡೂ ದಿಗ್ಗಜ ಸಂಸ್ಥೆಗಳು ಒಂದಾದರೆ, ದೇಶದ ಅತೀ ದೊಡ್ಡ ಆನ್ ಲೈನ್ ಮಾರಾಟಗಾರ ಸಂಸ್ಥೆಯ ಖ್ಯಾತಿಗೆ ಪಾತ್ರವಾಗಲಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ