ಬಿಜೆಪಿ 'ಕೋಮಸಂಘರ್ಷದ ತಾಯಿ' ಎಂದ ಕಾಂಗ್ರೆಸ್

ಸೋಮವಾರ, 17 ಅಕ್ಟೋಬರ್ 2016 (15:05 IST)
ಬ್ರಿಕ್ಸ್ ಶೃಂಗಸಭೆಯಲ್ಲಿ ಭಯೋತ್ಪಾದನೆ ವಿರುದ್ಧ ಕಿಡಿಕಾರಿದ ಪ್ರಧಾನಿ ಮೋದಿ ಪಾಕಿಸ್ತಾನವನ್ನು ಭಯೋತ್ಪಾದನೆಯ ತಾಯಿ ಎಂದು ಕರೆದಿದ್ದರಿಂದ ಪ್ರಚೋದನೆ ಪಡೆದಂತಿರುವ ವಿರೋಧ ಪಕ್ಷ ಕಾಂಗ್ರೆಸ್ ಬಿಜೆಪಿಗೆ ಕೋಮು ಸಂಘರ್ಷದ ತಾಯಿಯ ಪಟ್ಟ ಕಟ್ಟಿದೆ. 
"ಪಾಕಿಸ್ತಾನ ಭಯೋತ್ಪಾದನೆಯ ತಾಯಿ, ಬಿಜೆಪಿ ಕೋಮುಸಂಘರ್ಷದ ತಾಯಿ", ಉತ್ತರ ಪ್ರದೇಶ ರಾಜಕೀಯ ಧ್ರುವೀಕರಣಕ್ಕೆ ಲವ್ ಜಿಹಾದ್, ಬೀಫ್ ರಾಜಕೀಯ, ಮತಾಂತರ..... ಎಂದು ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದಾರೆ. 
 
ಪ್ರಧಾನಿ ಮೋದಿಯವರು ಪಾಕ್ ವಿರುದ್ಧ ಆಡಿರುವ ಕಠಿಣ ಮಾತುಗಳನ್ನು ವಿಧಾನಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡಿರುವ ಉತ್ತರಪ್ರದೇಶ ರಾಜಕೀಯಕ್ಕೆ ಜೋಡಿಸಲು ಸಿಬಲ್ ಮಾಡಿರುವ ಪ್ರಯತ್ನಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್, ಪಾಕಿಸ್ತಾನದ ವಿಚಾರ ಚರ್ಚೆಗೆ ಬಂದಾಗ ಅದನ್ನು ರಕ್ಷಿಸಲು ಕಾಂಗ್ರೆಸ್ ಓಡೋಡಿ ಬರುತ್ತದೆ ಎಂದಿದ್ದಾರೆ.
 
ಪ್ರಧಾನಿ ಅವರು ಸ್ವಾತಂತ್ರ್ಯೋತ್ಸವ ದಿನದ ಭಾಷಣದಲ್ಲಿ ಬಲೂಚಿಸ್ತಾನ ಬಗ್ಗೆ ಉಲ್ಲೇಖಿಸಿದಾಗ, ಮೊದಲು ಟೀಕಿಸಿದವರು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್. ಈ ಉದಾಹರಣೆಗಳನ್ನಿಟ್ಟುಕೊಂಡು ಕಾಂಗ್ರೆಸ್ ರಾಷ್ಟ್ರ ವಿರೋಧಿಯೋ ಅಥವಾ ಇಲ್ಲವೋ ಎಂಬುದನ್ನು ದೇಶದ ಜನರೇ ನಿರ್ಧರಿಸಲಿ ಎಂದು ರಾವ್ ಹೇಳಿದ್ದಾರೆ.                              
 
ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಮತ್ತು ದಿಗ್ವಿಜಯ್ ಸಿಂಗ್ ಹೇಳಿಕೆಗಳನ್ನು ಸಹ ರಾವ್ ಉಲ್ಲೇಖಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ