ಪಂಜಾಬ್, ಗೋವಾ ಆಯ್ತು, ಮತ್ತೀಗ ಗುಜರಾತ್, ಹಿಮಾಚಲದ ಕಡೆ ಆಪ್ ಕಣ್ಣು

ಸೋಮವಾರ, 3 ಅಕ್ಟೋಬರ್ 2016 (17:06 IST)
ಪ್ರಚಂಡ ಬಹುಮತದೊಂದಿಗೆ ಗೆದ್ದು ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ  ಇತರ ರಾಜ್ಯಗಳಲ್ಲೂ ಅಧಿಕಾರ ಗಳಿಸುವತ್ತ ಸರ್ವ ಪ್ರಯತ್ನಗಳನ್ನು ನಡೆಸುತ್ತಿದೆ. ಪಂಜಾಬ್ ಮತ್ತು ಗೋವಾದಲ್ಲಿ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿರುವ ಆಪ್ ಮತ್ತೀಗ ಬಿಜೆಪಿ ಪ್ರಾಬಲ್ಯದ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಕಡೆ ಗಮನ ಹರಿಸುತ್ತಿದೆ. 
ಈ ಕುರಿತು ಪ್ರತಿಕ್ರಿಯಿಸಿರುವ ಆಪ್‌ನ ಪಂಜಾಬ್, ಹಿಮಾಚಲ ಪ್ರದೇಶದ ಉಸ್ತುವಾರಿ ಸಂಜಯ್ ಸಿಂಗ್, ಆಪ್ ಪಂಜಾಬ್ನಲ್ಲಿ 113ರಲ್ಲಿ 93 ಸ್ಥಾನಗಳನ್ನು ಗೆಲ್ಲಲಿದೆ ಎಂದು ಇತ್ತೀಚಿನ ಸಮೀಕ್ಷೆ ಫಲಿತಾಂಶ ನೀಡಿದೆ. ನಾವು ಪಂಜಾಬ್‌ನಲ್ಲಿ ಗೆಲುವು ಸಾಧಿಸುವುದು ನಿಶ್ಚಿತ. ಆದರೆ ಉತ್ತರ ಪ್ರದೇಶದಲ್ಲಿ ಚುನಾವಣೆಯನ್ನೆದುರಿಸುವ ಬಗ್ಗೆ ಇನ್ನು ನಿರ್ಧರಿಸಿಲ್ಲ ಎಂದು ಅವರು ಹೇಳಿದ್ದಾರೆ.
 
ಪಂಜಾಬ್ ಚುನಾವಣೆ ಬಳಿಕ ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಿಮಾಚಲ ಪ್ರದೇಶ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ನಾವು ಹಿಮಾಚಲದಲ್ಲಿ ಎಲ್ಲ 68 ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದೇವೆ. ಅಕ್ಟೋಬರ್ 16 ರಂದು ಕೇಜ್ರಿವಾಲ್ ಗುಜರಾತ್‌ನಲ್ಲಿ ಪ್ರಥಮ ಸಾರ್ವಜನಿಕ ಸಭೆಯನ್ನು ನಡೆಸಲಿದ್ದಾರೆ ಎಂದಿದ್ದಾರೆ ಅವರು.
 
ಹಿಮಾಚಲ ಲೋಕಹಿತ ಪಾರ್ಟಿ, ಆಪ್ ಪಕ್ಷದಲ್ಲಿ ವಿಲೀನಗೊಂಡ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಮಾತನ್ನಾಡುತ್ತಿದ್ದ ಅವರು, ಪಕ್ಷ ರಾಜ್ಯದಲ್ಲಿ 10 ಲಕ್ಷ ಸದಸ್ಯರನ್ನು ಹೊಂದುವ ಗುರಿ ಹೊಂದಿದ್ದು, ಈಗಾಗಲೇ ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ