ಮೋದಿಯ ಮಹತ್ವಾಕಾಂಕ್ಷಿ ಬುಲೆಟ್ ಟ್ರೇನ್ ವಿಶೇಷತೆಗಳೇನು ಗೊತಾ..? ಇಲ್ಲಿವೆ ನೋಡಿ

ಗುರುವಾರ, 14 ಸೆಪ್ಟಂಬರ್ 2017 (12:22 IST)
ಮಹತ್ಬಾಕಾಂಕ್ಷಿಯ ಹೈಸ್ಪೀಡ್ ಬುಲೆಟ್ ಟ್ರೇನ್ ಯೋಜನೆಗೆ ಅಹಮದಾಬಾದ್`ನಲ್ಲಿ ಚಾಲನೆ ಸಿಕ್ಕಿದೆ. ದೊಕ್ಲಾಮ್ ವಿಷಯದಲ್ಲಿ ಭಾರತದ ಪರ ನಿಂತಿದ್ದ ಜಪಾನ್ ದೇಶ, ಬುಲೆಟ್ ಟ್ರೇನ್ ಯೋಜನೆ ಆರಂಭಿಸುವ ಮೂಲಕ ಭಾರತಕ್ಕೆ ಮತ್ತಷ್ಟು ಹತ್ತಿರವಾಗುತ್ತಿದೆ. ಭಾರತದ ಆರ್ಥಿಕ ವ್ಯವಸ್ಥೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅನುಕೂಲವಾಗುತ್ತೆ ಎನ್ನಲಾಗುತ್ತಿರುವ ಬುಲೆಟ್ ಟ್ರೇನ್ ವಿಶೇಷತೆಗಳು ಇಲ್ಲಿವೆ.

1. ಅಹಮದಾಬಾದ್ – ಮುಂಬೈ ನಡುವಿನ 508 ಕಿ.ಮೀ ಸಂಚರಿಸುವ ಬುಲೆಟ್ ಟ್ರೇನ್

2. 1.1 ಲಕ್ಷ ಕೋಟಿ ರೂಪಾಯಿಯ ಬೃಹತ್ ಯೋಜನೆ

3. ಯೋಜನೆಯ ಶೇ.81ರಷ್ಟು ಅಂದರೆ 88,000 ಕೋಟಿ ರೂ. ಹಣವನ್ನ ಮೃದು ಸಾಲವಾಗಿ .0.1 ಬಡ್ಡಿ ದರದಲ್ಲಿ ವಿನಿಯೋಗಿಸಲಿರುವ ಜಪಾನ್, 50 ವರ್ಷಗಳಲ್ಲಿ ಈ ಹಣ ಮರುಪಾವತಿಸಬೇಕು.

4. ಪ್ರಧಾನಿ ನರೇಂದ್ರ ಮೋದಿ ತವರು ಅಹಮದಾಬಾದ್`ನಿಂದ ಮುಂಬೈಗೆ 750 ಪ್ರಯಾಣಿಕರನ್ನ ಹೊತ್ತು ಪ್ರಯಾಣಿಸಲಿರುವ ಬುಲೆಟ್ ಟ್ರೇನ್

5. 8 ಗಂಟೆಗಳ ಪ್ರಯಾಣದ ಸಮಯ 3 ಗಂಟೆಗೆ ಕಡಿತ. ಎಲ್ಲ 12 ನಿಲ್ದಾಣಗಳಲ್ಲಿ ಸ್ಟಾಪ್ ಕೊಟ್ಟರೆ 3 ಗಂಟೆ, 4 ನಿಲ್ದಾಣಗಳಲ್ಲಿ ಸ್ಟಾಪ್ ಕೊಟ್ಟರೆ 2 ಗಂಟೆಯಲ್ಲಿ ಅಹಮದಾಬಾದ್`ನಿಂದ ಮುಂಬೈ ತಲುಪಲಿದೆ..

6. ಬುಲೆಟ್ ಟ್ರೇನ್`ನ ಟಾಪ್ ಸ್ಪೀಡ್ ಗಂಟೆಗೆ 320 ಕಿ.ಮೀ ಆಗಿದ್ದು, ಸರಾಸರಿ 250 ಕಿ.ಮೀ ವೇಗದಲ್ಲಿ ಬುಲೆಟ್ ಟ್ರೇನ್ ಸಂಚರಿಸಲಿದೆ. ಈಗಾಗಲೇ ಭಾರತದಲ್ಲಿರುವ ಅತ್ಯಂತ ವೇಗದ ರೈಲಿನ ಡಬಲ್ ವೇಗದಲ್ಲಿ ಈ ಬುಲೆಟ್ ಟ್ರೇನ್ ಸಂಚರಿಸಲಿದೆ.

7. 508 ಕಿ.ಮೀನಷ್ಟು ಮಾರ್ಗ ಇದಾಗಿದ್ದು, ಶೇ. 92ರಷ್ಟು ಪ್ರಯಾಣದಲ್ಲಿ ಎಲಿವೇಟೆಡ್ ಮಾರ್ಗದಲ್ಲಿ, ಶೇ.6ರಷ್ಟನ್ನ ಸುರಂಗದಲ್ಲಿ ಸಂಚರಿಸಲಿದೆ. ಉಳಿದ ಸಂಚಾರ ನೆಲ ಮಾರ್ಗದ ಹಳಿ ಮೇಲೆ ಸಂಚರಿಸಲಿದೆ. ದೇಶದ ಅತ್ಯಂತ ಉದ್ದದ 21 ಕಿ.ಮೀ ಸುರಂಗದಲ್ಲಿ ಬುಕಲೆಟ್ ಟ್ರೇನ್ ಸಂಚರಿಸಲಿದ್ದು, ಥಾಣೆ ಬಳಿ ಸಮುದ್ರದದಡಿಯ 7 ಕಿ.ಮೀ ಸುರಂಗದಲ್ಲಿ ಸಂಚರಿಸಲಿದೆ.

8. ಬುಲೆಟ್ ಟ್ರೇನ್ ಸಂಚಾರ ಎಲ್ಲಿ ಅಂತ್ಯವಾಗಲಿದೆ ಎಂಬ ಬಗ್ಗೆ ಮಹಾರಾಷ್ಟ್ರ ಸರ್ಕಾರ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ರೈಲ್ವೆಯಿಂದ ಪರ್ಯಾಯ ಭೂಮಿ ನೀಡುವ ಒಪ್ಪಂದದ ಮೇರೆಗೆ ಬುಲೆಟ್ ಟ್ರೇನ್`ಗೆ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್`ನಲ್ಲಿ 9000 ಚದರಡಿ ಜಾಗ ನೀಡಲು ಮಹಾರಾಷ್ಟ್ರ ಸರ್ಕಾರ ಒಪ್ಪಿದೆ.
 
9. ವಿಶ್ವದ 15 ದೇಶಗಳಲ್ಲಿ ಬುಲೆಟ್ ಟ್ರೇನ್ ಇದ್ದು, ಚೀನಾದ ಶಾಂಘೈನಲ್ಲಿ 430 ಕಿ.ಮೀ ವೇಗದ ಟ್ರೇನ್ ಸಂಚರಿಸುತ್ತಿದೆ.
20,000 ಕೆಲಸಗಾರರು ಈ ಯೋಜನೆಗಾಗಿ ದುಡಿಯಲಿದ್ದು, ಅವರನ್ನ ಭವಿಷ್ಯದ ಇದೇ ರೀತಿಯ ಯೋಜನೆಗಳಿಗೆ ಬಳಸಲು ನಿರ್ಧರಿಸಲಾಗಿದೆ. 300 ಮಂದಿ ಭಾರತೀಯ ರೈಲ್ವೆ ಉದ್ಯೋಗಿಗಳಿಗೆ ಜಪಾನಿನಲ್ಲಿ ತರಬೇತಿ ನೀಡಲಾಗುತ್ತಿದೆ. ಇನ್ನುಳಿದ 4000 ಮಂದಿಗೆ ವಡೋದರದ ರೈಲ್ ಟ್ರೇನಿಂಗ್ ಇನ್ಸ್`ಟಿಟ್ಯೂಟ್`ನಲ್ಲಿ ತರಬೇತಿ ನೀಡಲಾಗುತ್ತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ