ಸಿಎಂ ಪಳನಿಸ್ವಾಮಿ, ಪನ್ನೀರ್ ಸೆಲ್ವಂ ಬಣಗಳ ವಿಲೀನ

ಸೋಮವಾರ, 21 ಆಗಸ್ಟ್ 2017 (15:43 IST)
ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಮಾಜಿ ಸಿಎಂ ಪನ್ನೀರ್ ಸೆಲ್ವಂ ಬಣಗಳು ಇಂದು ವಿಲೀನಗೊಂಡಿವೆ.
ಚೆನ್ನೈನಲ್ಲಿರುವ ಪಕ್ಷದ ಕಚೇರಿಯಲ್ಲಿ ಉಭಯ ಬಣಗಳು ವಿಲೀನಗೊಂಡಿದ್ದು, ಪನ್ನೀರ್ ಸೆಲ್ವಂ ಉಪಮುಖ್ಯಮಂತ್ರಿಯಾಗಿ ಕೆಲ ಶಾಸಕರು ಇಂದು ಸಂಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
 
ಬಣಗಳ ವಿಲೀನದ ನಂತರ ಮಾತನಾಡಿದ ಸಿಎಂ ಪಳನಿಸ್ವಾಮಿ, ಎಐಎಡಿಎಂಕೆ ಪಕ್ಷವನ್ನು ಎಂಜಿಆರ್, ಜಯಲಲಿತಾರಂತಹ ದಿಗ್ಗಜರು ಮುನ್ನಡೆಸಿದ್ದಾರೆ. ಇದೀಗ ಪನ್ನೀರ್ ಸೆಲ್ವಂ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದು ಘೋಷಿಸಿದ್ದಾರೆ.
 
ನಮ್ಮೆಲ್ಲರ ಪಾಲಿಗೆ ಓ. ಪನ್ನೀರ್ ಸೆಲ್ವಂ ಅಣ್ಣನಂತೆ, ಅವರ ಜೊತೆಯಲ್ಲಿ ಪಕ್ಷ ಮುನ್ನಡೆಸುತ್ತೇವೆ. ಅಮ್ಮನ ಆಶಯವು ನಾವು ಜೊತೆಯಾಗುವುದೇ ಆಗಿದೆ. ಎಂಜಿಆರ್.ಜಯಲಲಿತಾ ಕನಸನ್ನು ನನಸುಗೊಳಿಸುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
 
ನಂತರ ಮಾತನಾಡಿದ ಎಐಎಡಿಎಂಕೆ ಪಕ್ಷದ ಸಂಚಾಲಕ ಪನ್ನೀರ್ ಸೆಲ್ವಂ, ನಾವೆಲ್ಲರು ಒಂದಾಗಿದ್ದೇವೆ. ಒಗ್ಗಟ್ಟಾಗಿ ಇರುತ್ತೇವೆ. ಅಮ್ಮನ ಆಶೀರ್ವಾದದಿಂದಲೇ ಎರಡೂ ಬಣಗಳು ಒಂದಾಗುತ್ತಿವೆ ಎಂದು ಮಾಜಿ ಸಿಎಂ ಪನ್ನೀರ್ ಸೆಲ್ವಂ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ