ಬೆಂಗಳೂರು: ಕೊರೋನಾ ಭೀತಿಯ ನಡುವೆಯೂ ಇಂದಿನಿಂದ ಯಲಹಂಕದ ವಾಯುನೆಲೆಯಲ್ಲಿ ಏರ್ ಇಂಡಿಯಾ ಶೋ ಆರಂಭವಾಗಿದೆ. ಇಂದು ಬೆಳಿಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಏರ್ ಶೋಗೆ ಚಾಲನೆ ನೀಡುತ್ತಿದ್ದಾರೆ.
ಇಂದಿನಿಂದ ಫೆಬ್ರವರಿ 5 ರವರೆಗೆ 13 ನೇ ಏರ್ ಶೋ ಆಯೋಜಿಸಲಾಗಿದೆ. ಈ ಬಾರಿ ಕೊರೋನಾ ಕಾರಣದಿಂದ ಪ್ರತಿನಿತ್ಯ ಕೇವಲ 15 ಸಾವಿರ ಪ್ರೇಕ್ಷಕರಿಗೆ ಮಾತ್ರ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಈ ಬಾರಿಯ ಪ್ರಮುಖ ಆಕರ್ಷಣೆಯೆಂದರೆ ರಫೇಲ್ ಯುದ್ಧ ವಿಮಾನ, ಸೂರ್ಯ ಕಿರಣ ಮತ್ತು ಸಾರಂಗ್ ಜುಗಲ್ ಬಂದಿಯಾಗಿರಲಿದೆ. ಆಪ್ ಮೂಲಕ ಟಿಕೆಟ್ ಪಡೆದುಕೊಳ್ಳಬಹುದಾಗಿದೆ. ಶೋ ಪ್ರತಿನಿತ್ಯ ಬೆಳಿಗ್ಗೆ 10.15 ರಿಂದ 12 ಮತ್ತು ಮಧ್ಯಾಹ್ನ 3 ರಿಂದ 5 ರವರೆಗೂ ನಡೆಯಲಿದೆ.