ರಾಷ್ಟ್ರಗೀತೆಗೆ ನಿಷೇಧ ಹೇರಿದ ಉತ್ತರಪ್ರದೇಶದ ಅಲಹಾಬಾದ್ ಶಾಲೆ..!

ಭಾನುವಾರ, 7 ಆಗಸ್ಟ್ 2016 (14:17 IST)
ಯುಪಿಯ ಶಾಲೆಯೊಂದರಲ್ಲಿ ರಾಷ್ಟ್ರಗೀತೆಗೆ ನಿಷೇಧ ಹೇರಿದ ಘಟನೆ ನಡೆದಿದೆ. ಈ ಶಾಲೆಯಲ್ಲಿ ಕಳೆದ 12 ವರ್ಷಗಳಿಂದ ರಾಷ್ಟ್ರಗೀತೆ ಹಾಡಿಸಿಲ್ಲ. ಇದನ್ನು ವಿರೋಧಿಸಿ 8 ಶಿಕ್ಷಕರು ಕೆಲಸ ತೊರೆದಿದ್ದಾರೆ. 

 
ಉತ್ತರಪ್ರದೇಶದ ಅಲಹಾಬಾದ್‌ನ ಎಂಎ ಕಾನ್ವೆಂಟ್ ಶಾಲೆಯಲ್ಲಿ ಇಂತಹ ಆಘಾತಕಾರಿ ಘಟನೆ ನಡೆದಿದ್ದು. ಗೀತೆಯ ಸಾಲಿನಲ್ಲಿ ಬರುವ 'ಭಾರತ ಭಾಗ್ಯ ವಿಧಾತ' ಎನ್ನುವ ಪದಗಳು ಇಸ್ಲಾಂಗೆ ವಿರುದ್ಧವಾದದ್ದು ,ಹೀಗಾಗಿ ನಿಷೇಧಿಸಿದ್ದೇವೆ ಎಂದು ಶಾಲೆಯ ಸಂಘಟನೆ ಹೇಳಿದೆ.
 
ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಭರ್ಜರಿ ತಯಾರಿ ನಡೆಯುತ್ತಿದ್ದು, ಎಲ್ಲ ಶಾಲಾ ಕಾಲೇಜು, ಸಂಸ್ಥೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಕಟ್ಟುನಿಟ್ಟಿನ ಆದೇಶವಿದೆ. ಹಾಗಾಗಿ ಈ ಶಾಲೆಯಲ್ಲೂ ಸ್ವಾತಂತ್ರೋತ್ಸವ ಆಚರಣೆಗಾಗಿ ಭರ್ಜರಿ ತಯಾರಿ ನಡೆದಿದೆ.
 
ಆದ್ರೆ ರಾಷ್ಟ್ರಗೀತೆ ಹಾಡುವ ಕುರಿತು ಇದೀಗ ಪ್ರಸ್ತಾಪವಾಗಿದ್ದು. ಇನ್ನೂ ಇದುವರೆಗೂ ಈ ಶಾಲೆಯಲ್ಲಿ ರಾಷ್ಟ್ರಗೀತೆ ಹಾಡಿಲ್ಲ, ಹಾಡುವಂತಿಲ್ಲ ಎಂದು ಆಡಳಿತ ಮಂಡಳಿಯ ಸದಸ್ಯರು ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 
 
 

ವೆಬ್ದುನಿಯಾವನ್ನು ಓದಿ