ವಿಚಿತ್ರವೆನಿಸಿದರೂ ನೂರಕ್ಕೆ ನೂರರಷ್ಟು ಸತ್ಯ : ಫೋನ್ ಕದ್ದ ಕಳ್ಳನೊಂದಿಗೆ ಪ್ರೀತಿಯಲ್ಲಿ ಬಿದ್ದ ಯುವತಿ

ಮಂಗಳವಾರ, 1 ಆಗಸ್ಟ್ 2023 (15:12 IST)
ಪ್ರೀತಿ ಯಾವಾಗ ಎಲ್ಲಿ ಯಾರ ಮೇಲೆ ಹೇಗೆ ಹುಟ್ಟುವುದು ಯಾರಿಗೂ ತಿಳಿಯುವುದಿಲ್ಲ. ಪ್ರೀತಿ ಕುರುಡು ಎಂಬ ಮಾತಿನಂತೆ ಬ್ರೆಜಿಲ್ ಮೂಲದ ಮಹಿಳೆಯೊಬ್ಬಳು ತನ್ನ ಫೋನ್ ಕದ್ದ ಕಳ್ಳನ ಪ್ರೀತಿಯ ಬಲೆಗೆ ಬಿದ್ದಿದ್ದಾಳೆ. 
 
ಪೋನ್ ಜೊತೆಗೆ ಮನಸ್ಸು ಕದ್ದ ಈ ವಿಚಿತ್ರ ಲವ್ಸ್ಟೋರಿ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಜೋಡಿ ಹಕ್ಕಿಗಳು ತಮ್ಮ ಪ್ರೀತಿಯ ವಿಚಾರವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ಟ್ವಿಟರ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೀಗಾಗಲೇ ಈ ವಿಡಿಯೋ 38ಸಾವಿರ ವೀಕ್ಷಣೆಯನ್ನು ಪಡೆದುಕೊಂಡಿದ್ದು, ಜೊತೆಗೆ ಸಾಕಷ್ಟು ಹಾಸ್ಯಸ್ಪದ ಕಾಮೆಂಟ್ಗಳನ್ನು ಕಾಣಬಹುದು.

ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ದುರದೃಷ್ಟವಶಾತ್ ನನ್ನ ಪೋನ್ ಯಾರೋ ಕಸಿದುಕೊಂಡು ಹೋಗಿದ್ದರು. ಮತ್ತೊಂದೆಡೆ, ಕಳ್ಳನು ತಾನು ಕದ್ದಿರುವ ಫೋನ್ನಲ್ಲಿ ಅವಳ ಫೋಟೋವನ್ನು ನೋಡಿದ ನಂತರ ಮಹಿಳೆಯ ಬಗ್ಗೆ ತನ್ನ ಭಾವನೆಗಳು ಬದಲಾಗಿದೆ. ಜೊತೆಗೆ ಪೋನ್ ಕದ್ದಿದ್ದಕ್ಕಾಗಿ ಪಶ್ಚಾತ್ತಾಪ ಪಟ್ಟೆ ಎಂದು ತಮ್ಮ ಡೇಟೀಂಗ್ ವೇಳೆ ತಮ್ಮ ಪ್ರೀತಿ ಹೇಗೆ ಹುಟ್ಟಿಕೊಂಡಿತು ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ