ಪತ್ನಿ ಜೊತೆ ಫೋನ್ನಲ್ಲಿ ಮಾತನಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಕೊಲೆ!

ಗುರುವಾರ, 3 ಆಗಸ್ಟ್ 2023 (12:43 IST)
ಬೆಂಗಳೂರು : ತನ್ನ ಹೆಂಡತಿಯೊಂದಿಗೆ ಫೋನ್ನಲ್ಲಿ ಹೆಚ್ಚಾಗಿ ಮಾತನಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಚಿಕ್ಕಪ್ಪನ ಮಗನಿಂದಲೇ ವ್ಯಕ್ತಿಯ ಭೀಕರ ಕೊಲೆಯಾಗಿರುವ ಘಟನೆ ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಂದೀಪ್ ಕುಮಾರ್ ಕೊಲೆಯಾದ ವ್ಯಕ್ತಿಯಾದರೆ, ಆತನ ಚಿಕ್ಕಪ್ಪನ ಮಗ ಶುಬೋದ್ ಮಂಡಲ್ ಹತ್ಯೆ ನಡೆಸಿದ ಆರೋಪಿ. ಇಬ್ಬರು ಕೂಡಾ ಬಿಹಾರ ಮೂಲದವರು.

ಸಂದೀಪ್ ಕೂಲಿ ಕೆಲಸಕ್ಕಾಗಿ ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಚಿಕ್ಕಜಾಲದಲ್ಲಿ ರೂಂ ಮಾಡಿಕೊಂಡು ಸ್ನೇಹಿತರೊಂದಿಗೆ ವಾಸವಿದ್ದ. ಕಳೆದ 3 ತಿಂಗಳ ಹಿಂದಷ್ಟೇ ಶುಬೋದ್ ಕೂಡಾ ಬೆಂಗಳೂರಿಗೆ ಬಂದಿದ್ದ. ಈ ವೇಳೆ ಸಂದೀಪ್ಗೆ ತನ್ನ ಪತ್ನಿ ಜೊತೆ ಶುಬೋದ್ ಫೋನ್ನಲ್ಲಿ ಹೆಚ್ಚಾಗಿ ಮಾತನಾಡುತ್ತಿದ್ದುದು ತಿಳಿದುಬಂದಿತ್ತು. ಈ ನಡುವೆ ಸಂದೀಪ್ಗೆ ತನ್ನ ಪತ್ನಿ ಜೊತೆ ಶುಬೋದ್ ಅಕ್ರಮ ಸಂಬಂಧ ಹೊಂದಿರೋ ಶಂಕೆಯೂ ಮೂಡಿತ್ತು. 

ಶುಕ್ರವಾರ ರಾತ್ರಿ ಮದ್ಯಪಾನ ಮಾಡುತ್ತಿದ್ದ ವೇಳೆ ಇಬ್ಬರ ನಡುವೆ ಇದೇ ವಿಚಾರವಾಗಿ ಜಗಳ ಪ್ರಾರಂಭವಾಗಿತ್ತು. ಜಗಳದ ಬಳಿಕ ಮಲಗಿದ್ದ ಸಂದೀಪ್ ಕುಮಾರ್ ಮೇಲೆ ಶುಬೋದ್ ಹಲ್ಲೆ ನಡೆಸಿ ಕೊಲೆ ಮಾಡಿದ್ದ. ಬಳಿಕ ಸ್ಥಳದಿಂದ ಆತ ಪರಾರಿಯಾಗಿದ್ದ.

ಸಂದೀಪ್ ಕೊಲೆಯಾದ 24 ಗಂಟೆಯವರೆಗೂ ಆತನ ಶವ ಅದೇ ರೂಂನಲ್ಲಿ ಇತ್ತು. ಶನಿವಾರ ರಾತ್ರಿ ಸಂದೀಪ್ ಸ್ನೇಹಿತ ರೂಂಗೆ ಬಂದಾಗ ಆತ ಸಾವನ್ನಪ್ಪಿರೋದು ಬೆಳಕಿಗೆ ಬಂದಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ