ಪಂಜಾಬ್ ಸಿಎಂ ಆಗಿ ಅಮರೀಂದರ್ ಸಿಂಗ್ ಪದಗ್ರಹಣ

ಗುರುವಾರ, 16 ಮಾರ್ಚ್ 2017 (11:24 IST)
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತ ಗಳಿಸಿದ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿಯಾಗಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಧಾನಿ ಚಂಢೀಗಡದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಿ.ಪಿ. ಸಸಸಿಂಗ್ ಬದ್ನೋರ್ ಪ್ರತಿಜ್ಞಾವಿಧಿ ಬೋಧಿಸಿದರು.

ಅಮರೀಂದರ್ ಸಿಂಗ್ ಜೊತೆ ನವಜೋತ್ ಸಿಂಗ್ ಸಿಧು, ಮನ್ ಪ್ರೀತ್ ಬಾದಲ್, ಬ್ರಹ್ಮ ಮಹೀಂದ್ರಾ, ಚರಂಜಿತ್ ಚನ್ನಿ, ರಾಣಾ ಗುರ್ಜಿತ್, ಸಾಧು ಸಿಂಗ್ ಧರಮ್ಸೋತ್, ತ್ರಿಪಾಠ್ ಬಜ್ವಾ ಸಚಿವರಾಗಿ ಪ್ರಮಾಣವಚನ ಸ್ವಿಕರಿಸಿದರು.
ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭಾಗವಹಿಸಿದ್ದರು.

ಪಂಜಾಬ್ ನೂತನ ಮುಖ್ಯಮಂತ್ರಿ ಅಮರೀಂದರ್ ಸಿಂಗ್`ಗೆ ಪ್ರಧಾನಮಂತ್ರಿ ನರೇಂದ್ರಮೋದಿ ಟ್ವಿಟ್ಟರ್`ನಲ್ಲಿ ಶೂಭಕೋರಿದ್ದು, ಪಂಜಾಬ್ ಪ್ರಗತಿಗೆ ಶ್ರಮಿಸುವಂತೆ ಹಾರೈಸಿದ್ದಾರೆ.

ವೆಬ್ದುನಿಯಾವನ್ನು ಓದಿ