ಅಮರ್ತ್ಯ ಸೇನ್ ಅವರು ದೇಶದ್ರೋಹಿ-ಸುಬ್ರಮಣಿಯನ್ ಸ್ವಾಮಿ

ಸೋಮವಾರ, 29 ಜನವರಿ 2018 (06:42 IST)
ನವದೆಹಲಿ : ‘ ಭಾರತ ರತ್ನ’ ಗೌರವಾನ್ವಿತ ಅಮರ್ತ್ಯ ಸೇನ್ ಅವರನ್ನು ದೇಶದ್ರೋಹಿ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಹೇಳಿದ್ದಾರೆ.

 
ಆರೆಸ್ಸೆಸ್ ನಾಯಕರಿಗೆ ಪದ್ಮ ಪ್ರಶಸ್ತಿ ನೀಡಿರುವುದಕ್ಕೆ ಬಿಜೆಪಿ ವಿರುದ್ದ ಕಾಂಗ್ರೆಸ್ ವಾಗ್ದಾಳಿ ನಡೆಸಿರುವ ಹಿನ್ನಲೆಯಲ್ಲಿ ಆಕ್ರೋಶಗೊಂಡ ಸುಬ್ರಮಣಿಯನ್ ಸ್ವಾಮಿ ಅವರು,’ ಆರೆಸ್ಸೆಸ್ ದೇಶದ ನಾಗರೀಕರು. ಅವರು ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಆದರೆ ಅವರ ಪರಿಶ್ರಮವನ್ನು ಗುರುತಿಸುತ್ತಿಲ್ಲ. ಆರೆಸ್ಸೆಸ್ ಅವರು ಯಾವುದೇ ನಿರೀಕ್ಷೆ ಇಲ್ಲದೆ ಸಾಮಾಜಿಕ ಸೇವೆ ಮಾಡುತ್ತಿದ್ದಾರೆ. ಆದರೆ ಎನ್.ಡಿ.ಎ. ದೇಶದ್ರೋಹಿಯಾಗಿರುವ ಅಮರ್ತ್ಯ ಸೇನ್ ಅವರಿಗೆ ‘ಭಾರತ ರತ್ನ’ ನೀಡಿ ಗೌರವಿಸಿತ್ತು. ನಲಂದಾ ವಿಶ್ವವಿದ್ಯಾನಿಲಯದಲ್ಲಿ ಲೂಟಿ ಮಾಡಿರುವುದು ಬಿಟ್ಟರೆ ಅವರು ದೇಶಕ್ಕಾಗಿ ಮಾಡಿರುವುದಾದರೂ ಏನು? ಅವರು ಕೇವಲ ಎಡಪಂಥೀಯರಾದ ಕಾರಣಕ್ಕೆ ಹಾಗು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಒತ್ತಾಯ ಹೇರಿರುವುದಕ್ಕೆ ಪ್ರಶಸ್ತಿ ನೀಡಲಾಗಿತ್ತು’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ