ಭಾರತಕ್ಕೆ ಬಿಗ್ ಶಾಕ್ ನೀಡಿದ ಅಮೇರಿಕಾ

ಶನಿವಾರ, 1 ಜೂನ್ 2019 (10:55 IST)
ನವದೆಹಲಿ : ಭಾರತಕ್ಕೆ ನೀಡಲಾಗಿರುವ ಅಭಿವೃದ್ಧಿಶೀಲ ರಾಷ್ಟ್ರ ಎಂಬ ಮಾನ್ಯತೆಯನ್ನುರದ್ದುಗೊಳಿಸಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷರ ಘೋಷಣಾ ಪತ್ರದಲ್ಲಿ ತಿಳಿಸಲಾಗಿದೆ.




1975ರ ನವೆಂಬರ್​ 24ರಂದು ಹೊರಡಿಸಿದ್ದ ಕಾರ್ಯಕಾರಿ ಆದೇಶ ಸಂಖ್ಯೆ 11888 ಪ್ರಕಾರ ಅಮೆರಿಕ ಅಧ್ಯಕ್ಷರು ಸಾಮಾನ್ಯ ಪದ್ಧತಿಯ ಆದ್ಯತೆಗಳಿಗಾಗಿ (ಜಿಎಸ್​ಪಿ) ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರ ಎಂದು ಘೋಷಿಸಿದ್ದರು.


ಆದರೆ, ಈಗ ಅಮೆರಿಕದ ಉತ್ಪನ್ನಗಳಿಗೆ ಸಮಾನವಾದ ಮತ್ತು ಸುಲಭವಾದ ಮಾರುಕಟ್ಟೆ ಒದಗಿಸುವ ವಿಷಯದಲ್ಲಿ ಭಾರತದಿಂದ ಯಾವುದೇ ಭರವಸೆ ಬಂದಿಲ್ಲ ಹೀಗಾಗಿ ಭಾರತಕ್ಕೆ ನೀಡಲಾಗಿರುವ ಅಭಿವೃದ್ಧಿಶೀಲ ರಾಷ್ಟ್ರ ಎಂಬ ಮಾನ್ಯತೆಯನ್ನು ರದ್ದುಗೊಳಿಸಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷರ ಘೋಷಣಾ ಪತ್ರದಲ್ಲಿ ತಿಳಿಸಲಾಗಿದೆ. ಇದರಿಂದಾಗಿ ಸಿಎಸ್​ ಪಿವಿ ಉತ್ಪನ್ನಗಳ ವಹಿವಾಟಿನ ಮೇಲೆ ನೇರ ಪರಿಣಾಮ ಬೀರಲಿದೆ ಎನ್ನಲಾಗಿದೆ.



 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ