ಡಾ ವಿಜಯಲಕ್ಷ್ಮಿ ಬಾಳೆಕುಂದ್ರಿ ಪ್ರಕಾರ ಮಕ್ಕಳಿಗೆ ಮೊಟ್ಟೆಗಿಂತ ಇದನ್ನು ಕೊಡೋದು ಬೆಸ್ಟ್

Krishnaveni K

ಮಂಗಳವಾರ, 19 ಆಗಸ್ಟ್ 2025 (10:55 IST)
ಖ್ಯಾತ ವೈದ್ಯೆ ಡಾ ವಿಜಯಲಕ್ಷ್ಮಿ ಬಾಳೆಕುಂದ್ರಿ ಹಿಂದೊಮ್ಮೆ ತಮ್ಮ ಅಂಕಣದಲ್ಲಿ ಮೊಟ್ಟೆಗಿಂತಲೂ ಶಾಲಾ ಮಕ್ಕಳಿಗೆ ಚಿಕ್ಕಿ ಕೊಡೋದು ಬೆಸ್ಟ್ ಎಂದಿದ್ದಾರೆ. ಇದಕ್ಕೆ ಅವರು ನೀಡಿದ ಕಾರಣವೂ ಇಂಟ್ರೆಸ್ಟಿಂಗ್ ಆಗಿ ಇದೆ.

ಶಾಲಾ ಮಕ್ಕಳ ಆರೋಗ್ಯ ದೃಷ್ಟಿಯಿಂದ ಮೊಟ್ಟೆ ಕೊಡುವ ಯೋಜನೆಯಿದೆ. ಶಾಲಾ ಮಕ್ಕಳು ಎಂದು ಮಾತ್ರವಲ್ಲ, ಮನೆಯಲ್ಲಿಯೂ ಮಕ್ಕಳಿಗೆ ಆರೋಗ್ಯಕ್ಕೆ, ಬೆಳವಣಿಗೆಗೆ ಉತ್ತಮ ಎಂದು ಮೊಟ್ಟೆ ಕೊಡುತ್ತೇವೆ. ಆದರೆ ಮೊಟ್ಟೆಯಲ್ಲಿರುವುದಕ್ಕಿಂತಲೂ ಅಧಿಕ ಪ್ರೊಟೀನ್ ಇರುವ ಆಹಾರ ವಸ್ತುವೊಂದಿದೆ.

ಅದುವೇ ನೆಗಡಲೆ ಬಳಸಿ ಮಾಡುವ ಚಿಕ್ಕಿ. ಇದಕ್ಕಿಂತ ಉತ್ತಮ ಪ್ರೊಟೀನ್ ಬಾರ್ ಇನ್ನೊಂದಿಲ್ಲ ಎನ್ನುತ್ತಾರೆ ಅವರು. ಮೊಟ್ಟೆಯಲ್ಲಿ 100 ಮಿ.ಗ್ರಾಂ. ತಿನ್ನುವುದರಿಂದ 14 ಮಿ.ಗ್ರಾಂ. ಪ್ರೊಟೀನ್ ಸಿಗುತ್ತದೆ. ಆದರೆ 100 ಗ್ರಾಂ ಕಡ್ಲೆಕಾಳು ತಿಂದರೆ 28 ಮಿ.ಗ್ರಾಂ ಪ್ರೊಟೀನ್ ಸಿಗುತ್ತದೆ.

ತುಪ್ಪ, ನೆಲಗಡಲೆ ಮತ್ತು ಬೆಲ್ಲ ಹಾಕಿ ಮಾಡುವ ಚಿಕ್ಕಿ ಬಾರ್ ಗಿಂತ ಅತ್ಯುತ್ತಮ ಮತ್ತು ಆರೋಗ್ಯಕರ ಪ್ರೊಟೀನ್ ಬಾರ್ ಇನ್ನೊಂದಿಲ್ಲ. ಮಕ್ಕಳಿಗೆ ಇದಕ್ಕಿಂತ ಉತ್ತಮ ಪ್ರೊಟೀನ್ ಮತ್ತೊಂದಿಲ್ಲ. ಕಡಲೆ, ತುಪ್ಪ, ಬೆಲ್ಲ ಎನ್ನುವುದು ನಮ್ಮ ಸಾಂಪ್ರದಾಯಿಕ ಪದ್ಧತಿ. ನಮ್ಮ ಹಳೆಯ ಆರೋಗ್ಯ ಪದ್ಧತಿಯನ್ನು ಪಾಲಿಸಿಕೊಂಡು ಬಂದರೆ ನಮಗೆ ಯಾವ ಆರೋಗ್ಯ ಸಮಸ್ಯೆಯೂ ಬರುವುದಿಲ್ಲ ಎಂದು ಅವರು ಹೇಳಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ