ಮುಸ್ಲಿಮರನ್ನು ಓಲೈಸಲು ಕಾಂಗ್ರೆಸ್ಸಿಗರು ವಂದೇ ಮಾತರಂ ತಿರಸ್ಕರಿಸಿದರು: ಅಮಿತ್ ಶಾ ಆರೋಪ
‘ವಂದೇ ಮಾತರಂ ನಮ್ಮ ದೇಶದ ಸಂಸ್ಕೃತಿಯ ಪ್ರತೀಕವಾಗಿತ್ತು. ಹಾಡಿಗೆ ಕೋಮು ಬಣ್ಣ ಹಚ್ಚುವುದು ತಪ್ಪು. ಈ ಹಾಡು ಯಾವುದೇ ಜನಾಂಗ, ಧರ್ಮಕ್ಕೆ ಸಂಬಂಧಿಸಿದ್ದಲ್ಲ, ರಾಷ್ಟ್ರೀಯತೆಯ ಪ್ರತೀಕದ ಹಾಡು’ ಎಂದು ವಂದೇ ಮಾತರಂ ಬಗ್ಗೆ ಶಾ ಹೇಳಿಕೆ ನೀಡಿದ್ದಾರೆ.
ವಂದೇ ಮಾತರಂ ಬರೆದ ಬನ್ ಕಿಂ ಚಂದ್ರ ಚಟ್ಟೋಪಾಧ್ಯಾಯ ಅವರ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಮಿತ್ ಶಾ ರಾಷ್ಟ್ರೀಯತೆಯ ಪ್ರತೀಕವಾಗಿದ್ದ ಹಾಡನ್ನು ಧರ್ಮದ ಹೆಸರಿನಲ್ಲಿ ಮೂಲೆಗುಂಪಾಗಿಸಿದ್ದು ಕಾಂಗ್ರೆಸ್ ಎಂದು ಆರೋಪಿಸಿದ್ದಾರೆ.