ಒಂದೇ ದಿನ ಇಷ್ಟೊಂದು ದೂರ ನಡೆದರಂತೆ ರಾಹುಲ್ ಗಾಂಧಿ!
ಇದನ್ನು ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದು, ಜನರಿಗೆ ಈ ನಡಿಗೆಯ ಚಾಲೆಂಜ್ ಸ್ವೀಕರಿಸಲು ಆಹ್ವಾನ ನೀಡಿದೆ. ರಾಹುಲ್ ಕೈಲಾಸ ಪರ್ವತದ ಹಿನ್ನಲೆಯಲ್ಲಿ ನಿಂತಿರುವ ಫೋಟೋ ಪ್ರಕಟಿಸಿರುವ ಕಾಂಗ್ರೆಸ್ ಅವರ ಯಾತ್ರೆಯ ವಿವರವನ್ನೂ ನೀಡಿದೆ.
ರಾಹುಲ್ ಗಾಂಧಿ ಯಾತ್ರೆ ಆರಂಭಿಸುವ ಮೊದಲೇ ಚಿಕನ್ ಸೂಪ್ ಸೇವಿಸಿದರು ಎಂಬ ಕಾರಣಕ್ಕೆ ವಿವಾದವಾಯ್ತು. ನಂತರ ಬಿಜೆಪಿ ರಾಹುಲ್ ನಿಜವಾಗಿಯೂ ಯಾತ್ರೆ ಕೈಗೊಂಡಿದ್ದಾರೆಯೇ ಇಲ್ಲವೇ ಎಂದು ಅನುಮಾನ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ ಈ ಫೋಟೋ ಸಹಿತ ವಿವರಣೆ ಒದಗಿಸಿದೆ.