ಬಿಜೆಪಿ ನಾಯಕರಿಗೆ ಟಾರ್ಗೆಟ್ ಫಿಕ್ಸ್ ಮಾಡಿದ ಅಮಿತ್ ಶಾ
ಕಾಂಗ್ರೆಸ್ ತನ್ನ 17 ಮಿತ್ರ ಪಕ್ಷಗಳೊಂದಿಗೆ ಸಮಾಲೋಚನೆ ಸಭೆ ನಡೆಸಿದ ಬೆನ್ನಲ್ಲೇ ಬಿಜೆಪಿಯೂ ಸಭೆ ನಡೆಸಿದ್ದು. ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಲು ಚುರುಕು ಮುಟ್ಟಿಸಿದೆ. ಕಳೆದ ಬಾರಿ ಸೋತ ಸ್ಥಾನಗಳ ಮೇಲೆ ವಿಶೇಷವಾಗಿ ಗಮನ ಹರಿಸುವಂತೆ ನಾಯಕರಿಗೆ ಸೂಚಿಸಿದ್ದಾರೆ.
ಕರ್ನಾಟಕ, ಪ. ಬಂಗಾಲ, ಒಡಿಶಾ ಸೇರಿದಂತೆ ಬಿಜೆಪಿ ಬಲ ಇಲ್ಲದ ಕಡೆ ವಿಶೇಷ ಆಸಕ್ತಿ ವಹಿಸಿ ಕೆಲಸ ಮಾಡುವಂತೆ ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ.