ನಾನೇ ಜಯಲಲಿತಾ, ಶೋಭನ್ ಬಾಬು ಪುತ್ರಿ: ಪ್ರಧಾನಿ, ರಾಷ್ಟ್ರಪತಿ, ಸುಪ್ರೀಂಕೋರ್ಟ್`ಗೆ ಪತ್ರ
ಸೋಮವಾರ, 28 ಆಗಸ್ಟ್ 2017 (11:56 IST)
ಜಯಲಲಿತಾ ಸಾವಿನ ವಿಚಾರಣೆ ಗೊಂದಲದಲ್ಲಿರುವ ಬೆನ್ನಲ್ಲೇ ಅಮೃತಾ ಎಂಬ ಯುವತಿ ನಾನೇ ಜಯಲಲಿತಾ ಪುತ್ರಿ ಎಂದು ಹೇಳಿಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಸುಪ್ರೀಂಕೋರ್ಟ್ ಮತ್ತು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.
ನಾನು ಜಯಲಲಿತಾ ಪುತ್ರಿ, ಶೋಭನ್ ಬಾಬು ನನ್ನ ತಂದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಅಮೃತಾ ಹೆರಿಗೆ ಮಾಡಿಸಿದ ಲಲಿತಾ ಅವರ ಅಫಿಡವಿಟ್ ಸಹ ಸಲ್ಲಿಸಿದ್ದಾರೆ. ತಮಿಳುನಾಡಿನ ಅಧಿಕಾರಿಗಳಿಂದ ನನಗೆ ನ್ಯಾಯ ಸಿಗುವ ನಂಬಿಕೆ ಇಲ್ಲ.ಸಿಆರ್`ಪಿಸಿ 164ರಡಿ ರಹಸ್ಯ ಹೇಳಿಕೆ ದಾಖಲಿಸಿಕೊಳ್ಳಬೇಕು. ಡಿಎನ್`ಎ ಪರೀಕ್ಷೆ ನಡೆಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ.
ಜಯಲಲಿತಾ ನನ್ನ ಹೆಸರಿನಲ್ಲಿ ಕೆಲ ಆಸ್ತಿಗಳನ್ನೂ ಖರೀದಿಸಿದ್ದಾರೆ. ಒಡವೆಗಳನ್ನೂ ಖರೀದಿಸಿರುವ ಬಗ್ಗೆ ಮಾಹಿತಿ ಇದೆ. ದಿನಕರನ್, ಶಶಿಕಲಾ, ಪನ್ನೀರ್ ಸೆಲ್ವಂ, ದೀಪಾ ಎಲ್ಲರಿಗೂ ಮಂಪರು ಪರೀಕ್ಷೆ ನಡೆಸುವಂತೆ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಂದೊಮ್ಮೆ ಈ ಪತ್ರವನ್ನ ಗಂಭೀರವಾಗಿ ಪರಿಗಣಿಸಿ ಡಿಎನ್`ಎ ಪರೀಕ್ಷೆ ನಡೆಸಿದ್ದಲ್ಲಿ ಸತ್ಯ ಹೊರಬರಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ