ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಬರೋಬ್ಬರಿ ₹1.3ಕೋಟಿ ಮೌಲ್ಯದ ಎಲೆಕ್ಟ್ರಿಕ್ ಬಸ್ ಕೊಡುಗೆ

Sampriya

ಬುಧವಾರ, 3 ಸೆಪ್ಟಂಬರ್ 2025 (16:29 IST)
Photo Credit X
ಚೆನ್ನೈ ಮೂಲದ ಆಟೋಮೊಬೈಲ್ ಕಂಪನಿಯೊಂದು ಬುಧವಾರ ತಿರುಮಲ ತಿರುಪತಿ ದೇವಸ್ಥಾನಕ್ಕೆ ಬರೋಬ್ಬರಿ ₹1.3 ಕೋಟಿಯ ಎಲೆಕ್ಟ್ರಿಕ್ ಬಸ್ ಅನ್ನು ಕೊಡುಗೆಯಾಗಿ ನೀಡಿದೆ. 

ತಿರುಪತಿಯ ಶ್ರೀವಾರಿ ದೇವಸ್ಥಾನದಲ್ಲಿ ದೇಣಿಗೆಯನ್ನು ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಯ್ಯ ಚೌಧರಿ ಅವರಿಗೆ ಹಸ್ತಾಂತರಿಸಲಾಯಿತು.

ಚೆನ್ನೈ ಮೂಲದ ಕಂಪನಿಯ ಗಣೇಶ್ ಮಣಿ ಮತ್ತು ವೆಂಕಟರಾಮನ್ ಅವರು ಶ್ರೀವಾರಿ ದೇವಸ್ಥಾನದ ಮುಂಭಾಗದಲ್ಲಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಯ್ಯ ಚೌಧರಿ ಅವರಿಗೆ ಕೀಲಿಗಳನ್ನು ಹಸ್ತಾಂತರಿಸಿದರು.‌

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ