ತಮಿಳುನಾಡಿಗೆ ಮತ್ತೊಬ್ಬ ಸಿಎಂ?
ಶಶಿಕಲಾ ಆಪ್ತ ಟಿಟಿ ದಿನಕರನ್ ನೇತೃತ್ವದಲ್ಲಿ ಇನ್ನೊಂದು ರಾಜಕೀಯ ಗುದ್ದಾಟಕ್ಕೆ ವೇದಿಕೆ ಸಿದ್ದವಾಗಿದ್ದು, ಎಡಪ್ಪಾಡಿ ಬದಲಿಗೆ ಪಿ ಧನಪಾಲನ್ ಅವರನ್ನು ಮುಖ್ಯಮಂತ್ರಿ ಪಟ್ಟಕ್ಕೇರಿಸಲು ಸಿದ್ಧತೆ ನಡೆದಿದೆ.
ತಮಿಳುನಾಡು ಸಿಎಂ ಆಗಿ ಸದ್ಯ ಸ್ಪೀಕರ್ ಆಗಿರುವ ಧನಪಾಲ್ ಅವರನ್ನು ನೇಮಿಸಬೇಕು ಎಂದು ದಿನಕರನ್ ಬೆಂಬಲಿಗ ವೆಟ್ರಿವೇಲ್ ಪತ್ರಿಕಾಗೋಷ್ಠಿಯಲ್ಲಿ ಬೇಡಿಕೆ ಮುಂದಿಟ್ಟಿದ್ದಾರೆ. ತಮಿಳುನಾಡಿನ ಈ ರಾಜಕೀಯ ಅತಂತ್ರ ಸ್ಥಿತಿ ಇನ್ನೆಷ್ಟು ದಿನ ಮುಂದುವರಿಯುತ್ತೋ ಕಾದು ನೋಡಬೇಕು.