ಆಗಸ್ಟ್ 29 ಕ್ಕೆ ಪ್ರಧಾನಿ ಮೋದಿ ಸಂಪುಟಕ್ಕೆ ಸರ್ಜರಿ

ಮಂಗಳವಾರ, 22 ಆಗಸ್ಟ್ 2017 (17:59 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಸ್ಟ್ 29 ರಂದು ಸಚಿವ ಸಂಪುಟಕ್ಕೆ ಸರ್ಜರಿ ಮಾಡಲಿದ್ದು, ಹೊಸಬರಿಗೆ ಮಣೆಹಾಕುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಎಐಎಡಿಎಂಕೆ ಪಕ್ಷದ ಮೂವರು ಸಂಸದರು ಕೇಂದ್ರ ಸಚಿವ ಸ್ಥಾನ ಪಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
 
ಸಚಿವ ಸಂಪುಟದಲ್ಲಿರುವ ಕೆಲ ನಿಷ್ಕ್ರೀಯ ಸಚಿವರಿಗೆ ಕೊಕ್ ನೀಡಿ ಹೊಸಬರಿಗೆ ಆದ್ಯತೆ ನೀಡಲು ಪ್ರಧಾನಮಂತ್ರಿ ಮೋದಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. 
 
ಕರ್ನಾಟಕದಲ್ಲಿ ಕೆಲ ಸಚಿವರಿಗೆ ಹೆಚ್ಚುವರಿ ಹೊಣೆ ನೀಡಲಾಗುತ್ತದೆ ಎನ್ನುವ ವರದಿಗಳು ಕೇಳಿ ಬರುತ್ತಿವೆ. ಆದರೆ, ಆಗಸ್ಟ್ 29 ರಂದು ಯಾರಿಗೆ ಯಾವ ಖಾತೆ ಎನ್ನುವುದು ಅಂತಿಮವಾಗಿ ನಿರ್ಧಾರವಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ