ಆರ್ಬಿಐ ಮತ್ತೊಂದು ಭರ್ಜರಿ ಶಾಕ್?

ಬುಧವಾರ, 8 ಜೂನ್ 2022 (10:13 IST)
ಮುಂಬೈ : ಭಾರತೀಯ ರಿಸರ್ವ್ ಬ್ಯಾಂಕ್ನ ದ್ವೈಮಾಸಿಕ ಸಾಲ ನೀತಿ ಬುಧವಾರ ಪ್ರಕಟವಾಗಲಿದ್ದು, ಬ್ಯಾಂಕ್ ಗೃಹ, ವಾಹನ ಮತ್ತು ಇತರೆ ಸಾಲ ಪಡೆದವರಿಗೆ ಮತ್ತೊಂದು ಭರ್ಜರಿ ಶಾಕ್ ನೀಡುವ ಸಾಧ್ಯತೆ ಇದೆ.

ಹಣದುಬ್ಬರ ಪ್ರಮಾಣ ನಿಯಂತ್ರಣದಲ್ಲಿಡಲು ನಾನಾ ವಿತ್ತೀಯ ಕ್ರಮಗಳನ್ನು ಕೈಗೊಳ್ಳುತ್ತಿರುವ ಆರ್ಬಿಐ, ಬುಧವಾರ ತನ್ನ ಸಾಲ ನೀತಿಯಲ್ಲಿ ಸಾಲದ ಮೇಲಿನ ಬಡ್ಡಿದರವನ್ನು ಶೇ.0.25ರಿಂದ ಶೇ.0.50ರವರೆಗೆ ಹೆಚ್ಚಳ ಮಾಡುವ ಸಾಧ್ಯತೆ ಎನ್ನಲಾಗಿದೆ.

ಒಂದು ವೇಳೆ ನಿರೀಕ್ಷೆಯಂತೆ ಆರ್ಬಿಐ ಸಾಲದ ಮೇಲಿನ ಬಡ್ಡಿ ದರ ಏರಿಕೆ ಮಾಡಿದರೆ ಗೃಹ, ವಾಹನ ಮತ್ತು ಇತರೆ ಸಾಲಗಳ ಮಾಸಿಕ ಕಂತಿನಲ್ಲಿ ಮತ್ತಷ್ಟುಏರಿಕೆಯಾಗಲಿದೆ. ಕಳೆದ ತಿಂಗಳು ಕೂಡಾ ಆರ್ಬಿಐ ರೆಪೋದರವನ್ನು ಶೇ.0.40ರಷ್ಟುಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರಿಗೆ ಶಾಕ್ ನೀಡಿತ್ತು. ಅದರ ಬೆನ್ನಲ್ಲೇ ಮತ್ತೆ ಶಾಕ್ ನೀಡುವ ಎಲ್ಲಾ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಆರ್ಬಿಐನ ಗವರ್ನರ್ ಶಕ್ತಿಕಾಂತ್ ನೇತೃತ್ವದ ಹಣಕಾಸು ನೀತಿ ಸಮಿತಿಯು ಸೋಮವಾರದಿಂದಲೇ ತನ್ನ ಮೂರು ದಿನಗಳ ಸಭೆ ಆರಂಭಿಸಿದ್ದು, ಬುಧವಾರ ತನ್ನ ನಿರ್ಧಾರ ಪ್ರಕಟಿಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ